Sunday, November 24, 2024
Sunday, November 24, 2024

WhatsApp Business API ಘೋಷಣೆ ಮಾಡಿದ ಫೋರ್ಥ್ ಫೋಕಸ್

WhatsApp Business API ಘೋಷಣೆ ಮಾಡಿದ ಫೋರ್ಥ್ ಫೋಕಸ್

Date:

ಫೋರ್ಥ್ ಫೋಕಸ್ ಗ್ರೂಪ್ ತನ್ನ ಗ್ರಾಹಕರ ಅನುಕೂಲಕ್ಕಾಗಿ WhatsApp Business API ಎಂಬ ಹೊಸ ಸೌಕರ್ಯವನ್ನು ಪರಿಚಯಿಸುತ್ತಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಅತ್ಯಾಧುನಿಕ ವೆಬ್ ಮತ್ತು ಡಿಜಿಟಲ್ ಪರಿಹಾರಗಳ ಪೂರೈಕೆದಾರ ಸಂಸ್ಥೆಯಾಗಿರುವ ಫೋರ್ಥ್ ಫೋಕಸ್, ಇದೀಗ ತನ್ನ ಕ್ಷೇತ್ರದಿಂದ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದ್ದು WhatsApp Business API ಕೊನೆಗೂ ಘೋಷಿಸಿದೆ. ಜಗತ್ತಿನ ಅತ್ಯಂತ ಪ್ರಚಲಿತ ಮೆಸೇಜಿಂಗ್ ಆ್ಯಪ್ ಎನಿಸಿರುವ ವಾಟ್ಸಾಪ್ನ ಮೂಲಕವೇ ತನ್ನ ಗ್ರಾಹಕರೊಂದಿಗೆ ವ್ಯವಹರಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸನಿಹವಾಗಲು ಹಾಗೂ ಹೆಚ್ಚಿನ ಸೇವೆಯನ್ನು ಒದಗಿಸುವುದು ಫೋರ್ಥ್
ಫೋಕಸ್ ಸಂಸ್ಥೆಯ ಉದ್ದೇಶವಾಗಿದೆ.

ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ನಲ್ಲಿ ತಮ್ಮ ಗ್ರಾಹಕರೊಂದಿಗೆ ಸಂವಹನದಲ್ಲಿ ತೊಡಗಿಸಿಕೊಳ್ಳಲು ವ್ಯವಹಾರಗಳಿಗೆ ಆಯ್ಕೆಯನ್ನು ನೀಡುವ ಮೂಲಕ ಈ WhatsApp Business API
ಕೊಡುಗೆಯು ಗ್ರಾಹಕರ ಸಂವಹನ ಹಾಗೂ ಗ್ರಾಹಕ ಬೆಂಬಲ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ವಿಶ್ವದಾದ್ಯಂತ 2 ಶತ ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಗ್ರಾಹಕರಿಗೆ ಹಾಗೂ ಕಂಪನಿಯ ನಡುವೆ ಸಂಪರ್ಕ ಸಾಧಿಸಲು ಒಳ್ಳೆಯ ವೇದಿಕೆಯನ್ನು ಕಲ್ಪಿಸುತ್ತಿದೆ. ಇದರ ಮೂಲಕ ಗ್ರಾಹಕರಿಗೆ ಸಾಟಿಯಿಲ್ಲದ ಸೇವೆಯನ್ನು ನೀಡಲು ಸಾಧ್ಯವಿದೆ. ಫೋರ್ಥ್ ಫೋಕಸ್ನ WhatsApp Business API ಮೂಲಕ ಗ್ರಾಹಕರು ಪಡೆಯುವ ಪ್ರಯೋಜನಗಳು :

1. ಮಲ್ಟಿಪಲ್ ಏಜೆಂಟ್ಸ್ ಹಾಗೂ ಡ್ಯಾಶ್ಬೋರ್ಡ್: WhatsApp Business API ಮೂಲಕ ನೀವು ಬಹು-ಏಜೆಂಟ್ ಇನ್ಬಾಕ್ಸ್ ಅನ್ನು ಪಡೆಯುತ್ತೀರಿ. ಅಂದರೆ ಇಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ತ್ವರಿತ ನಿರ್ಣಯಗಳನ್ನು ಒದಗಿಸಲು ನಿಮ್ಮ ಡ್ಯಾಶ್ಬೋ ರ್ಡ್‌ಗೆ ನೀವು ಯಾವುದೇ ಸಂಖ್ಯೆಯ ಗ್ರಾಹಕ ಬೆಂಬಲ ಏಜೆಂಟ್ಗಳನ್ನು ನಿಯೋಜಿಸಬಹುದು. ಈ ಡ್ಯಾಶ್ಬೋ ರ್ಡ್ ಚಾಟ್ಗಳು ಮತ್ತು ಪ್ರಶ್ನೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ KPIಗಳು ಮತ್ತು ಯಶಸ್ಸಿನ ವಿಶ್ಲೇಷಣೆಗಳನ್ನು ಅಳೆಯಲು ಸಹ ಸಹಾಯ ಮಾಡುತ್ತದೆ. 2. ಸಂಪರ್ಕಗಳ ನಿರ್ವಹಣೆ: ನಿಮ್ಮ ಎಲ್ಲಾ ವಾಟ್ಸಾಪ್ ಸಂಪರ್ಕಗಳಿಗೆ ನೀವು ಆಮದು/ ರಫ್ತು, ಫಿಲ್ಟರ್ ಅಷ್ಟೇ ಅಲ್ಲದೇ ವಿಂಗಡಣೆ ಮಾಡುವ ಸೌಕರ್ಯ ಕೂಡ ಪಡೆಯಲಿದ್ದೀರಿ. ನೀವು ವೈಯಕ್ತೀಕರಿಸಿದ ಸಂದೇಶಗಳನ್ನು ನಿಮ್ಮ ಸಕ್ರಿಯ ಹಾಗೂ ನೀವು ಆಯ್ಕೆ ಮಾಡಿದ ಸಂಪರ್ಕ ಸಂಖ್ಯೆಗಳಿಗೆ ಕಳುಹಿಸಲು ನೀವು ಟ್ರ್ಯಾಕ್ ಮಾಡುವ ಸೌಲಭ್ಯ ಕೂಡ ಪಡೆಯುವಿರಿ. 3. ಸುಲಭ ಚಾಟ್ಬಾಟ್ ಬಿಲ್ಡರ್: ಕೆಲಸದಿಂದ ವಿರಾಮ ಇರುವ ಸಂದರ್ಭದಲ್ಲಿ ನಿಮ್ಮ ಕಸ್ಟಮರ್ ಸಪೋರ್ಟ್ ವ್ಯವಸ್ಥೆಯನ್ನು ಸ್ವಯಂಚಾಲಿತಗೊಳಿಸಲು, ನೀವೇ ನಿಮ್ಮ ಸ್ವಂತ ವಾಟ್ಸಾಪ್ ಚಾಟ್ಬೋಟ್ ರಚನೆ ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ಸಮಸ್ಯೆಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಚಾಟ್ಬೋಟ್ ವಿಫಲವಾದಲ್ಲಿ ಆಗ ಸಿಬ್ಬಂದಿಯೇ ಚಾಟ್ನಲ್ಲಿ ಮಧ್ಯ ಪ್ರವೇಶ ಮಾಡಬಹುದಾಗಿದೆ.

4. ವೇರಿಫೈಡ್ ಬ್ಯುಸಿನೆಸ್ ಖಾತೆ: ಸೋಶಿಯಲ್ ಮೀಡಿಯಾಗಳಲ್ಲಿ ವೇರಿಫೈಡ್ ಖಾತೆಗಳಿಗೆ ಇರುವ ಮಹತ್ವ ತಿಳಿದೇ ಇದೆ. ನೀವು ಕೂಡ ಫೇಸ್ಬುಕ್ನಿಂದ ಪರಿಶೀಲನೆಗೊಳಲ್ಪಟ್ಟ ವಾಟ್ಸಾಪ್ ಬ್ಯುಸಿನೆಸ್ ಖಾತೆಯೊಂದಿಗೆ ಸಂವಹನ ಮಾಡಬಹುದಾಗಿದೆ. ಇದರಿಂದ ನಿಮ್ಮ ಕಂಪನಿಯ ಬ್ರ್ಯಾಂಡ್ ಮೌಲ್ಯ ಹಾಗೂ ನಂಬಿಕೆ ಗ್ರಾಹಕರಲ್ಲಿ ಇನ್ನಷ್ಟು ಹೆಚ್ಚಾಗಲಿದೆ. 5. ಬ್ರಾಡ್ಕಾಸ್ಟ್ ಮೆಸೇಜ್: ಕೇವಲ ಒಂದೇ ಕ್ಲಿಕ್ನಲ್ಲಿನೀವು ನಿಮ್ಮ ವೈಯಕ್ತೀಕರಿಸಿದ ಸಂದೇಶ ಹಾಗೂ ರಿಮೈಂಡರ್ಗಳನ್ನು ಬ್ರಾಡ್ಕಾಸ್ಟ್ ಮಾಡಬಹುದಾಗಿದೆ. ಗ್ರಾಹಕರು ನಿಮ್ಮ ಸಂಪರ್ಕ ಸಂಖ್ಯೆಯನ್ನು ಸೇವ್ ಮಾಡದಿದ್ದರೂ ಸಹ ಈ ಸಂದೇಶಗಳು ತಲುಪುತ್ತವೆ. ನೀವು ಒಂದು ದಿನದಲ್ಲಿ 1,00,000 ಬ್ರಾಡ್ಕಾಸ್ಟ್ ಸಂದೇಶಗಳನ್ನು ಕಳುಹಿಸಬಹುದು* (ಶ್ರೇಣಿ 3 ರಲ್ಲಿ) 6. API ಕ್ಯಾಂಪೇನ್ ಮತ್ತು ಸಂದೇಶಗಳು ಗ್ರಾಹಕರಿಗೆ ವಾಟ್ಸಾಪ್ನ ಮೂಲಕವೇ ನಿಮ್ಮ ವ್ಯಾಪಾರ – ವ್ಯವಹಾರಗಳ ದೃಢೀಕರಣ ಆದೇಶ ಅಥವಾ ಟಿಕೆಟ್ ಗಳನ್ನು ಕಳುಹಿಸಬಹುದಾಗಿದೆ. ನಿಮ್ಮ ಸ್ವಂತ ಸಿ.ಆರ್,ಎಂ ಸೇವೆಗಳನ್ನು ಬಳಸಿಕೊಂಡು ಗ್ರಾಹಕರಿಗೆ API ಕ್ಯಾಂಪೇನ್ ಮೆಸೇಜ್ಗಳನ್ನು ಕಳುಹಿಸಬಹುದಾಗಿದೆ. 7. ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳು ಹಾಗೂ ಸಂಯೋಜನೆಗಳು ನಿಮ್ಮಿಷ್ಟದ ಝಾಪಿಯರ್, ಗೂಗಲ್ ಶೀಟ್ಸ್, ಶಾಪಿಫೈ, ವೂಕಾಮರ್ಸ್ ಸೇರಿದಂತೆ ವಿವಿಧ ಆ್ಯಪ್ಗಳನ್ನು ನೀವು ಸುಲಭವಾಗಿ ಸಂಯೋಜಿಸಬಹುದಾಗಿದೆ. ನಿಮ್ಮ ಅಪ್ಲಿಕೇಶನ್ಗಳಿಗೆ ಇದು ವೆಬ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

‘ವ್ಯವಹಾರಗಳು ಮತ್ತು ಉದ್ಯಮಗಳಿಗೆ ತಮ್ಮ ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಹಾಗೂ ಹೆಚ್ಚೆಚ್ಚು ಸಂವಹನ ನಡೆಸಲು, ಬಲವಾದ ಸಂಬಂಧಗಳನ್ನು ನಿರ್ಮಿಸಿ ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಿ, ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ WhatsApp Business API ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಫೋರ್ತ್ಫೋಕಸ್ ಗ್ರೂಪ್ ಸಂಸ್ಥಾಪಕ ಹಾಗೂ ನಿರ್ದೇಶಕ ವಿ. ಗೌತಮ್ ನಾವಡ ಹೇಳಿದ್ದಾರೆ.

ಇ-ಕಾಮರ್ಸ್, ಚಿಲ್ಲರೆ ವ್ಯಾಪಾರ, ಬ್ಯಾಂಕಿಂಗ್, ಪ್ರಯಾಣ ಸೇರಿದಂತೆ ವಿವಿಧ ಉದ್ಯಮಗಳ ಪಾಲಿಗೆ ಈ WhatsApp Business API ಖಂಡಿತವಾಗಿಯೂ ಒಂದು ಗೇಮ್ಚೇಂಜರ್ ಆಗಿದೆ. ಇದು ಗ್ರಾಹಕ ಸೇವೆಯನ್ನು
ಸುಧಾರಿಸುತ್ತೆ ಮಾತ್ರವಲ್ಲದೇ ಒಟ್ಟಾರೆ ವ್ಯಾಪಾರ ವ್ಯವಹಾರಗಳ ಯಶಸ್ಸನ್ನು ಹೆಚ್ಚಿಸಲು ಪರಿಣಾಮಕಾರಿ ಪಾತ್ರ ನಿರ್ವಹಿಸಲಿದೆ. ಫೋರ್ಥ್ ಫೋಕಸ್ ಗ್ರೂಪ್ನ WhatsApp Business API ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತುಅದು ನಿಮ್ಮ ವ್ಯಾಪಾರ ಸಂವಹನವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಕಂಡುಹಿಡಿಯಲು, ದಯವಿಟ್ಟು ಭೇಟಿ ನೀಡಿ: https://forthfocus.com/whatsapp-business-api

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!