ಉಡುಪಿ, ಜೂನ್ 18: ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಸಾರಥ್ಯದಲ್ಲಿ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರಾದ ರಘು ಪಾಂಡೇಶ್ವರ್ ಮತ್ತು ಪ್ರಭಾಕರ್ ಕುಂದರ್ ಅವರು ಡಾ. ಮನೋಜ್ ಗೋಡಬೋಲೆ ಅವರ ಸಣ್ಣ ಕಥೆ ಆಧಾರಿತ, ರವೀಂದ್ರ ಶೆಟ್ಟಿ ತಂತ್ರಾಡಿಯವರ ನಿರ್ದೇಶನದ ಕನ್ನಡ ಕಿರುಚಿತ್ರ ‘ಅಟುಳ’ ಹಾಗೂ ಪ್ರದೀಪ್ ಶೆಟ್ಟಿ ಬೇಳೂರು ಅವರ ಸಾಹಿತ್ಯ ಇರುವ ‘ಹೆತ್ತವ್ವ ಕೇಳವ್ವ’ ಹಾಡನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಕಲಾವಿದ ರಘು ಪಾಂಡೇಶ್ವರ್, ಕಿರುಚಿತ್ರಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ. ಹಲವಾರು ಪ್ರತಿಭಾವಂತ ನಟರು, ತಂತ್ರಜ್ಞರು ಮುಖ್ಯವಾಹಿನಿಗೆ ಬರಲು ಕಿರುಚಿತ್ರಗಳು ಸಹಕಾರಿ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಘಟನ ಕಾರ್ಯದರ್ಶಿ ಸತೀಶ್ ವಡ್ಡರ್ಸೆ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ, ಸಾಹಿತಿ ದೇವು ಹನೆಹಳ್ಳಿ, ಭಾರತ್ ಪೆಟ್ರೋಲಿಯಂ ನಿವೃತ್ತ ಡೆಪ್ಯೂಟಿ ಮಾರ್ಕೆಟಿಂಗ್ ಮೆನೇಜರ್ ನಾಗರಾಜ್ ಶೆಟ್ಟಿ ತತ್ತರ್‌ಮಕ್ಕಿ ಕಾಡೂರು, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಕಿರುಚಿತ್ರದಲ್ಲಿ ಅಭಿನಯಿಸಿದ ಕಲಾವಿದರಾದ ಸುಜಾತ ಅಂದ್ರಾದೆ, ಚೇಂಪಿ ದಿನೇಶ್ ಆಚಾರ್ಯ, ಸುಮನಾ ಹೇರ್ಳೆ, ಶ್ರೀಜನ್ಯ ಶೆಟ್ಟಿ, ಶಶಿಕುಮಾರ್, ಶಾಂಭವಿ, ಸಿನಿಮಾಟೋಗ್ರಫರ್ ರೋಹಿತ್ ಅಂಪಾರ್, ಸಂಗೀತ ನಿರ್ದೇಶಕ ಅರವಿಂದ ಶೇಟ್, ಮಂಜುನಾಥ ಹಿಲಿಯಾಣ ಮತ್ತಿತರರು ಉಪಸ್ಥಿತರಿದ್ದರು.