Sunday, January 19, 2025
Sunday, January 19, 2025

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಅದ್ದೂರಿಯಾಗಿ ಉದ್ಘಾಟಣೆಗೊಂಡ ಪೊಲ್ಕಿ ಜ್ಯುವೆಲ್ಲರಿ ಶೋ

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಅದ್ದೂರಿಯಾಗಿ ಉದ್ಘಾಟಣೆಗೊಂಡ ಪೊಲ್ಕಿ ಜ್ಯುವೆಲ್ಲರಿ ಶೋ

Date:

ಉಡುಪಿ, ಜೂನ್ 17: ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಜೂನ್ 17 ರಿಂದ 25 ರವರೆಗೆ ಮೊತ್ತ ಮೊದಲ ಬಾರಿಗೆ ಸುವರ್ಣ ಯುಗದ ನೆನಪುಗಳನ್ನು ಪುನರುಜ್ಜೀವಗೊಳಿಸುವ ಸಂಪ್ರದಾಯ, ಸಂಸ್ಕೃತಿ ಮತ್ತು ವಿಂಟೇಜ್ ಜೀವನಶೈಲಿಯಿಂದ ಶ್ರೀಮಂತ ಪರಂಪರೆಯನ್ನು ಗುರುತಿಸಲ್ಪಟ್ಟಿರುವ ಭಾರತೀಯ ಮೂಲದ ಆಭರಣಗಳ ವಿನ್ಯಾಸಗಳನ್ನು ಅನುಭವಿಸುವ ‘ವಿರಾಝ್ ಹೆರಿಟೇಜ್ ಪೊಲ್ಕಿ ಜ್ಯುವೆಲ್ಲರಿ ಶೋ’ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ನೆಕ್ಲೇಸ್, ಕಿವಿಯ ಓಲೆ, ಲಾಕೆಟ್, ಉಂಗುರ ಮತ್ತು ಬಳೆಗಳ ಬ್ರಹತ್ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದೆ. ಉಡುಪಿ ಸೌಂದರ್ಯ ತಜ್ಞೆಯರ ಜಿಲ್ಲಾಧ್ಯಕ್ಷೆ ಯಡ್ನ ಜತನ್ನ ವೆಸ್ಟರ್ನ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಗ್ರಾಹಕ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಉದ್ಯಮಿ ಸುಶ್ಮಿತಾ ಹೆಗ್ಡೆ ಬ್ರೈಡಲ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಚಿನ್ನಾಭರಣಗಳ ವಿನ್ಯಾಸ ಮತ್ತು ಗುಣಮಟ್ಟ ಗಮನಾರ್ಹವಾಗಿದೆ ಎಂದರು. ಉದ್ಯಮಿ ಯಾಸ್ಮಿನ್ ಫೀರೊಝ್ ತೋಟ ಫ್ಲೋರಲ್ ಕಲೆಕ್ಷನ್ ನ್ನು ಅನಾವರಣಗೊಳಿಸಿ ಪೊಲ್ಕಿ ಆಭರಣದ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರಾವಳಿ ಬೆಡಗಿ ಪ್ರಶಸ್ತಿಗೆ ಭಾಜನರಾದ ವಿದ್ಯಾ ಸರಸ್ವತಿ ಉಪಸ್ಥಿತರಿದ್ದರು.

ಖರೀದಿಸುವ ಪೊಲ್ಕಿ ಆಭರಣಗಳಿಗೆ IGI ಪ್ರಮಾಣ ಪತ್ರ ನೀಡಲಾಗುವುದು, ಪೊಲ್ಕಿ ಹರಳುಗಳಿಗೆ 100 ಶೇ ಮರಳಿ ಖರೀದಿಸುವ ಗ್ಯಾರಂಟಿ, ಬಾಳಿಕೆಯುದ್ದಕ್ಕೂ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ದೊರೆಯಲಿದೆ. ವಿಶೇಷ ಕೊಡುಗೆಯಾಗಿ ಬೆಳ್ಳಿ ನಾಣ್ಯಗಳು ಉಚಿತವಾಗಿ ಪಡೆಯಬಹುದು ಎಂದು ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಹೇಳಿದರು. ನಿತ್ಯಾನಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Advertisement

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!