Thursday, September 19, 2024
Thursday, September 19, 2024

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಧ್ವಜಸ್ಥಂಭಕ್ಕೆ ಕೊಡಲಿ ಮುಹೂರ್ತ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಧ್ವಜಸ್ಥಂಭಕ್ಕೆ ಕೊಡಲಿ ಮುಹೂರ್ತ

Date:

ಉಡುಪಿ, ಜೂನ್ 10: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಧ್ವಜಸ್ಥಂಭಕ್ಕೆ ಕೊಡಲಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಮಧುಸೂಧನ ತಂತ್ರಿ ಪ್ರಾರ್ಥನೆ ಸಲ್ಲಿಸಿ, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಹಣ್ಣು ಕಾಯಿ ಸಮರ್ಪಿಸಲಾಯಿತು. ತದನಂತರ ಧ್ವಜಮರದ ಸ್ಥಳಕ್ಕೆ ತೆರಳಿ ವೃಕ್ಷಪೂಜೆಯನ್ನು ನೆರವೇರಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಉಮೇಶ್ ನಾಯಕ್ ಪೆರ್ಣಂಕಿಲ, ಸಂದೀಪ್ ನಾಯಕ್ ಹೆಬ್ಬಾಗಿಲು, ಮಂಜುನಾಥ ನಾಯಕ್ ಕೋಡಿಬೈಲು, ಪೆರ್ಣಂಕಿಲ ಶ್ರೀಶ ನಾಯಕ್, ಮಠದ ಸುರೇಶ್ ತಂತ್ರಿ, ಮಹೇಶ್ ಕುಲಕರ್ಣಿ, ಶ್ರೀಪತಿ ಭಟ್, ದಾರುಶಿಲ್ಪಿ ನಾರಾಯಣ ಆಚಾರ್ಯ, ನಿಂಜೂರಿನ‌ ಭಗವದ್ಭಕ್ತರಾದ ದಿಲೀಪ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಸಂತೋಷ್ ಶೆಟ್ಟಿ, ಹರೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ಉದಯ ಶೆಟ್ಟಿ, ಮಂಜುನಾಥ ಆಚಾರ್ಯ, ಹರಿಕೃಷ್ಣ ಆಚಾರ್ಯ, ವಿಶ್ವನಾಥ ಭಂಡಾರಿ, ಸುಹಾಸ್ ಶೆಟ್ಟಿ, ಸುಕೇಶ್, ಸುಜಿತ್ ಮೊದಲಾದವರು ಭಾಗವಹಿಸಿದ್ದರು. ಜೂನ್ 14 ರಂದು ಸಂಜೆ 2 ಗಂಟೆಗೆ ನಿಂಜೂರಿನಿಂದ ಹೊರಟು ಸಂಜೆ 4 ಗಂಟೆಗೆ ಅಂಗಾರಕಟ್ಟೆಯಿಂದ ವೈಭವದ ಮೆರವಣಿಗೆಯೊಂದಿಗೆ ಧ್ವಜಮರವನ್ನು ಶ್ರೀ ಕ್ಷೇತ್ರ ಪೆರ್ಣಂಕಿಲಕ್ಕೆ ಸಾಗಿಸಲಾಗುವುದು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!