Sunday, January 19, 2025
Sunday, January 19, 2025

ಕುವೆಂಪು ಕನಸಿನ ಕರ್ನಾಟಕವನ್ನು ಉಳಿಸಿ ಬೆಳೆಸೋಣ: ಡಾ. ಸುಧಾಕರ ದೇವಾಡಿಗ

ಕುವೆಂಪು ಕನಸಿನ ಕರ್ನಾಟಕವನ್ನು ಉಳಿಸಿ ಬೆಳೆಸೋಣ: ಡಾ. ಸುಧಾಕರ ದೇವಾಡಿಗ

Date:

ಮಲ್ಪೆ, ಜೂನ್ 10: ಪುಟ್ಟಪ್ಪನೆನ್ನುವ ಮಲೆನಾಡಿನ ಸಾಮಾನ್ಯ ಬದುಕೊಂದು ಕುವೆಂಪು ಎನ್ನುವ ಕನ್ನಡದ ಅಸ್ಮಿತೆಯಾಗಿ ರೂಪುಗೊಂಡ ಪರಿಯನ್ನು ಅರಿಯಬೇಕಾದರೆ ಆ ಬದುಕು ಕೆನೆಗಟ್ಟಿದ ಹಾದಿಯ ನೆನಪಿನ ದೋಣಿಯೇರುವ ಜೊತೆಗೆ ಯುಗಮನಸ್ಸಿನ ಆ ಮಹಾಚೇತನವು ಕಟ್ಟಿನಿಲ್ಲಿಸಿದ ವೈಚಾರಿಕ ನೆಲೆಗಟ್ಟಿನ ಬರಹದೊಡಲನ್ನೂ ಹೊಕ್ಕು ನೋಡುವ ಅಗತ್ಯವಿದೆ ಎಂದು ಡಾ. ಸುಧಾಕರ ದೇವಾಡಿಗ ಹೇಳಿದರು. ಅವರು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಕುವೆಂಪು ಪ್ರತಿ಼ಷ್ಠಾನ ಕುಪ್ಪಳ್ಳಿ ಹಾಗೂ ಎಸ್‌ಡಿಎಮ್ ಕಾಲೇಜು ಉಜಿರೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ಎಂಬ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕುವೆಂಪು ಅವರ ಬದುಕಿನ ಕೆಲವು ಆಯ್ದ ಘಟನೆಗಳನ್ನೂ, ಬರಹಗಳ ಕೆಲವು ವಿಶಿಷ್ಟ ಉದಾಹರಣೆಗಳನ್ನೂ ಎದುರಿಗಿಟ್ಟು ಮಾತನಾಡಿದ ಅವರು, ಕುವೆಂಪು ಯಾವ ಎತ್ತರಕ್ಕೆ ಬೆಳೆದರು? ಹಾಗೆ ಬೆಳೆಯುವ ಹಾದಿಯಲ್ಲಿ ಏನೇನನ್ನು ಎದುರುಗೊಂಡರು? ಯಾವುದೇ ಪರಿಸರ, ಪರಿಸ್ಥಿತಿಯಲ್ಲೂ ಹೇಗೆ ಕುವೆಂಪುವಾಗಿಯೇ ಉಳಿದರೆಂಬುದನ್ನು ವಿವರಿಸುವ ಜೊತೆಗೆ ಕುವೆಂಪು ಅವರ ಬದುಕು ಮತ್ತು ಬರಹಗಳಲ್ಲಿ ಮಿಳಿತವಾದ ವಿಜ್ಞಾನ, ವೈಚಾರಿಕತೆಯ ಮೌಢ್ಯಮುಕ್ತ ಮನೋಧರ್ಮವನ್ನು ಯುವಚೇತನಗಳು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಬೇಕೆಂದರು. ಅಷ್ಟೇ ಅಲ್ಲದೆ ಕುವೆಂಪು ಭಾವಚಿತ್ರದೆದುರು ಭಾವುಕರಾಗುವುದಕ್ಕಿಂತ ಅವರೇ ತೋರಿದ ಈ ನೆಲದ ಇತಿಹಾಸದ ಭಾಗವಾದ ತಾಳಿಕೆಯ ಗುಣವನ್ನು ಅರಿತು ಎಲ್ಲರೊಡನೆ ಬೆರೆತು ಬದುಕುವ ಮೂಲಕ ‘ಸರ್ವಜನಾಂಗದ ಶಾಂತಿಯತೋಟ’ವೆಂಬ ಆ ದಾರ್ಶನಿಕ ಪ್ರತಿಭೆಯ ಕನಸಿನ ಕರ್ನಾಟಕಕ್ಕೇ ಮುಕ್ಕಾಗದಂತೆ ಕಾದುಕೊಳ್ಳುವ ಹೊಣೆಯೂ ಕನ್ನಡದ ಯುವ ಮನಸ್ಸುಗಳ ಮೇಲಿದೆ ಎಂದು ಎಚ್ಚರಿಸಿದರು.

ಕಾರ‍್ಯಕ್ರಮದ ಸಂಯೋಜಕರಾಗಿ ಭಾಗವಹಿಸಿದ ಎಸ್‌ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು, ಕರ್ನಾಟಕದ ಬೇರೆ ಬೇರೆ ಭಾಗಗಳ ಹೊಸ ತಲೆಮಾರಿಗೆ ಕುವೆಂಪು ವಿಚಾರಧಾರೆಯನ್ನು ಪಸರಿಸುವ ಕಾಯಕದಲ್ಲಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಜೊತೆಗೆ ಎಸ್‌ಡಿಎಂ ಕಾಲೇಜು ಕೈಗೂಡಿಸಿದ್ದರ ಹಿನ್ನೆಲೆ ಹಾಗೂ ಮಾಡಿದ ಸಾಧನೆಗಳನ್ನು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಪರಿಚಯಿಸಿದರು.

ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ‍್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಭಾರತಿ ವಂದಿಸಿದರು. ಅರ್ಚನಾ ನಿರೂಪಿಸಿದರು. ಕಾರ‍್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!