ಕೋಟ, ಜೂನ್ 9: ಯುವ ಬರಹಗಾರರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವಾಗಬೇಕು. ಇದರಿಂದ ಇನ್ನಷ್ಟು ಉದಯೋನ್ಮುಖ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ ಎಂದು ಹಿರಿಯ ಸಾಹಿತಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಉಪೇಂದ್ರ ಸೋಮಾಯಜಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಸಾರಥ್ಯದಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಇವರ ಆಸರೆಯಲ್ಲಿ ಯುವ ಕವಿ ರವೀಂದ್ರ ಶೆಟ್ಟಿ ತಂತ್ರಾಡಿಯವರ ಚೊಚ್ಚಲ ಕವನ ಸಂಕಲನ ಮನಸಿನ ಕನ್ನಡಿಯೊಳಗೆ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ, ಸಾಹಿತಿ ಶ್ರೀದೇವು ಹನೆಹಳ್ಳಿ ಅವರು ಯುವ ಕವಿ ರವೀಂದ್ರ ಶೆಟ್ಟಿ ತಂತ್ರಾಡಿಯವರ ಚೊಚ್ಚಲ ಕವನ ಸಂಕಲನ ಮನಸಿನ ಕನ್ನಡಿಯೊಳಗೆ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಘಟನ ಕಾರ್ಯದರ್ಶಿ ಸತೀಶ್ ವಡ್ಡರ್ಸೆ, ಭಾರತ್ ಪೆಟ್ರೋಲಿಯಂ ನಿವೃತ್ತ ಡೆಪ್ಯೂಟಿ ಮಾರ್ಕೆಟಿಂಗ್ ಮೆನೇಜರ್ ನಾಗರಾಜ್ ಶೆಟ್ಟಿ ತತ್ತರ್‌ಮಕ್ಕಿ, ಕಾಡೂರು, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಚಲನಚಿತ್ರ ನಟರಾದ ರಘು ಪಾಂಡೇಶ್ವರ್, ಪ್ರಭಾಕರ್ ಕುಂದರ್, ಸಾಂಸ್ಕೃತಿಕ ಚಿಂತಕ ನರಸಿಂಹಮೂರ್ತಿ ರಾವ್ ಉಪಸ್ಥಿತರಿದ್ದರು, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ಯುವ ಕವಿ ರವೀಂದ್ರ ಶೆಟ್ಟಿ ತಂತ್ರಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ದಿನೇಶ್ ಆಚಾರ್ಯ ಚೇಂಪಿ ವಂದಿಸಿದರು.