Home ಸುದ್ಧಿಗಳು ಪ್ರಾದೇಶಿಕ ಮುಂಬೈ ರಂಗ ಕಲಾವಿದ ಮೋಹನ್ ಮಾರ್ನಾಡ್ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ

ಮುಂಬೈ ರಂಗ ಕಲಾವಿದ ಮೋಹನ್ ಮಾರ್ನಾಡ್ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ

506
0

ಉಡುಪಿ, ಮೇ 31: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಮುಂಬೈಯ ಕನ್ನಡ ರಂಗಭೂಮಿಯ ಕಲಾವಿದ ಮೋಹನ್ ಮಾರ್ನಾಡ್ ಇವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ -2023 ನೀಡಿ ಗೌರವಿಸಲಾಯಿತು.

ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಮುಂಬೈಯ ಶಂಕ್ ಸ್ಟುಡಿಯೋದ ಮುಖ್ಯಸ್ಥರಾದ ಮನೋಹರ್ ನಾಯಕ್ ಅವರು ಸನ್ಮಾನಿಸಿ ಮಾತನಾಡುತ್ತಾ, ಮೋಹನ್ ಮಾರ್ನಾಡ ಒಬ್ಬ ಒಳ್ಳೆಯ ರಂಗ ಕಲಾವಿದರಾಗಿದ್ದು, ಮುಂಬೈಯ ಶ್ರೇಷ್ಠ ಕಂಠದಾನ ಕಲಾವಿದರು ಆಗಿರುತ್ತಾರೆ. ಇವರು ಮುಂಬೈ ಕನ್ನಡ ರಂಗಭೂಮಿಗೆ ಬಹುದೊಡ್ಡ ಆಸ್ತಿ ಎಂದರು.

ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಸಿ.ಎಸ್ ರಾವ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್, ಮನೋಹರ್ ತಿಂಗಳಾಯ, ರಾಘವೇಂದ್ರ ನಾಯಕ್, ನಾರಾಯಣ ಮಡಿ, ದಿನೇಶ್ ಉಪ್ಪೂರ್, ಸೀಮಾ ಮಾರ್ನಾಡ್, ನರಸಿಂಹಮೂರ್ತಿ, ಗಣೇಶ್ ಬ್ರಹ್ಮಾವರ, ಸುಮಿತ್ರ ಕೆರೆಮಠ, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ಸ್ವಾಗತಿಸಿ, ಉಪಾಧ್ಯಕ್ಷೆ ಸಂಧ್ಯಾ ಶೆಣೈ ವಂದಿಸಿದರು. ಸಂಚಾಲಕ ರವಿರಾಜ್ ಎಚ್‌.ಪಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.