ಉಡುಪಿ, ಮೇ 30: ಸರ್ಕಾರಿ ಶಾಲೆಗಳು ಹೊಸ ಶೈಕ್ಷಣಿಕ ವರ್ಷದೊಂದಿಗೆ ಮೇ 31 ಬುಧವಾರ ಪುನರಾರಂಭಗೊಳ್ಳಲಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ 72 ಸರ್ಕಾರಿ ಶಾಲೆಗಳು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿವೆ.
ಉಡುಪಿ ನಗರದ ವಳಕಾಡು ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳಿಗ್ಗೆ 9.00 ಗಂಟೆಗೆ ಶಾಸಕ ಯಶ್ಪಾಲ್ ಸುವರ್ಣ ಪ್ರಾರಂಭೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಬಳಿಕ 10 ಗಂಟೆಗೆ ನಿಟ್ಟೂರು ಹನುಮಂತನಗರದ ಶಾಲೆ, 10.30 ಕ್ಕೆ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ, 11.30 ಗಂಟೆಗೆ ಕೆ.ಪಿ.ಎಸ್. ಶಾಲೆ, ಕೊಕ್ಕರ್ಣೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಗಳಲ್ಲಿ ಶಾಸಕರು ಭಾಗವಹಿಸಲಿದ್ದಾರೆ.
ಉಡುಪಿ ವಿಧಾನಸಭೆ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕ ಸಮಿತಿಯ ಸದಸ್ಯರು, ಶಿಕ್ಷಣ ಪ್ರೇಮಿಗಳು ಸಂಬಂಧಿಸಿದ ಸಮೀಪದ ತಮ್ಮ ಶಾಲೆಗಳ ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಸಂಭ್ರಮ ಹೆಚ್ಚಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.
ಶಾಸಕರು ಪ್ರವರ್ತಕರಾಗಿರುವ ಪುಷ್ಪಾನಂದ ಫೌಂಡೇಶನ್ ವತಿಯಿಂದ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಉಡುಪಿ ವಿಧಾನ ಸಭಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಯ ಸುಮಾರು 12,000 ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ ಎಂದು ಶಾಸಕರ ಕಛೇರಿ ಪ್ರಕಟಣಿ ತಿಳಿಸಿದೆ.