ಮಂಗಳೂರು, ಮೇ 27: ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಸಮಾಜಕಾರ್ಯ ವಿಭಾಗದ ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಗ್ರಾಮೀಣ ಅಧ್ಯಯನ ಶಿಬಿರ ಮೇ 28 ರಿಂದ ಜೂನ್ 2 ರವರೆಗೆ ಬೈಂದೂರು ತಾಲೂಕಿನ ಮುದೂರು ಉದಯನಗರದ ಕೊರಗ ಸಮುದಾಯ ಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ, ಗ್ರಾಮೀಣ ಸಮೀಕ್ಷೆ, ಜಾಥಾ ಮತ್ತು ಬೀದಿ ನಾಟಕ, ವಿವಿಧ ಗ್ರಾಮೀಣ ಸಂಸ್ಥೆಗಳಿಗೆ ಭೇಟಿ, ಸಾಮಾಜಿಕ ಸಮಸ್ಯೆಗಳ ಕುರಿತು ಸಮುದಾಯ ಅರಿವು ಕಾರ್ಯಕ್ರಮ, ಕೃಷಿ ಅಧ್ಯಯನ ಭೇಟಿ, ಸ್ವಚ್ಛತಾ ಅಭಿಯಾನ, ಶ್ರಮದಾನ, ಗ್ರಾಮೀಣ ಸಹಭಾಗಿತ್ವ ಅಧ್ಯಯನ ನಡೆಯಲಿದೆ. ಶಿಬಿರದ ಉದ್ಘಾಟನಾ ಸಮಾರಂಭ ಮೇ 28 ಸಂಜೆ 4.30ಕ್ಕೆ ನಡೆಯಲಿದೆ.