ಬ್ರಹ್ಮಾವರ, ಮೇ 20: ಸೈಂಟ್ ಮೇರಿಸ್ ಕಾಲೇಜು ಬ್ರಹ್ಮಾವರ ನಡೆಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ತಿಲ್ಲಾನ 2023 ಉದ್ಘಾಟನಾ ಸಮಾರಂಭ ಕಾಲೇಜಿನ ಸಂಚಾಲಕರಾದ ರೆ.ಫಾ. ಎಂ. ಸಿ ಮಥಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲ್ವಿನ್ ಅಂದ್ರಾದೆ ನೆರವೇರಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ., ವಿದ್ಯಾರ್ಥಿ ಸಂಘದ ನಿರ್ದೇಶಕಿ ಡಾ.ವಿದ್ಯಾಲತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಮೇಶ್ ಭಟ್, ಕಾಲೇಜಿನ ಕಾರ್ಯದರ್ಶಿ ಅಲ್ವಾರಿಸ್, ಕೋಶಾಧಿಕಾರಿ ಜೋಯ್ಸನ್ ರಾಡ್ರಿಗಸ್, ವಿದ್ಯಾರ್ಥಿ ನಾಯಕ ದಿವ್ಯಾಂಶು, ಉಪನಾಯಕಿ ಆರಾಧ್ಯ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ನಾರಾಯಣ ಪ್ರಭು ಗುಳ್ಮೆ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಅಕ್ಷತ್ ಆಗಮಿಸಿದ್ದರು. ಒಟ್ಟು 9 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸಮಗ್ರ ತಂಡ ಪ್ರಶಸ್ತಿಯಲ್ಲಿ ಈ.ಸಿ.ಆರ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮೊದಲ ಸ್ಥಾನ, ಪೂರ್ಣಪ್ರಜ್ಞ ಕಾಲೇಜು ಉಡುಪಿ ದ್ವಿತೀಯ ಮತ್ತು ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತೃತೀಯ ಸ್ಥಾನ ಪಡೆಯಿತು.