ಮಲ್ಪೆ, ಮೇ 16: ಉಡುಪಿ ಶಾಸಕರಾಗಿ ಆಯ್ಕೆಯಾದ ಯಶ್ಪಾಲ್ ಸುವರ್ಣ ಅವರು ಮಲ್ಪೆ ಮೀನುಗಾರರ ಸಂಘದ ಕಚೇರಿಗೆ ಭೇಟಿ ನೀಡಿ. ಬಳಿಕ ಮಾತನಾಡಿದ ಅವರು, ಮೀನುಗಾರ ಸಂಘದ ಪದಾಧಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು.
ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ಕಾರ್ಯದರ್ಶಿ ರತ್ನಾಕರ ಸಾಲ್ಯಾನ್ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.