Friday, September 20, 2024
Friday, September 20, 2024

ಉಡುಪಿ ಜಿಲ್ಲೆ: ಯಾರಿಗೆ ಎಷ್ಟು ಮತ? ಇಲ್ಲಿದೆ ಸಂಪೂರ್ಣ ವಿವರ

ಉಡುಪಿ ಜಿಲ್ಲೆ: ಯಾರಿಗೆ ಎಷ್ಟು ಮತ? ಇಲ್ಲಿದೆ ಸಂಪೂರ್ಣ ವಿವರ

Date:

ಉಡುಪಿ, ಮೇ 14: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ಮತ ಎಣಿಕೆಯಲ್ಲಿ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ಜೆ.ಪಿ ಪಕ್ಷವು ಗೆಲುವು ಸಾಧಿಸಿದೆ.

118-ಬೈಂದೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 16,153 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದಿರುತ್ತಾರೆ. ಉಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್ 626, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ 613, ಬಿ. ಶ್ಯಾಮ 296 ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ. 1,208 ನೋಟಾ ಮತದಾನವಾಗಿರುತ್ತದೆ.

119-ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು 1,02,424 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 41,556 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿರುತ್ತಾರೆ. ಇನ್ನುಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ರಮೇಶ್ 1,053, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1,257 ಹಾಗೂ ಪಕ್ಷೇತರ ಅಭ್ಯರ್ಥಿ ಜಿ. ಚಂದ್ರಶೇಖರ್ 728 ಮತಗಳನ್ನು ಪಡೆದಿರುತ್ತಾರೆ. ಒಟ್ಟು 1,141 ನೋಟಾ ಮತಗಳು ಚಲಾವಣೆಯಾಗಿರುತ್ತದೆ.

120-ಉಡುಪಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರು 97,079 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 32,776 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ಪ್ರಸಾದ್ ಕಾಂಚನ್ ಅವರು ಒಟ್ಟು 64,303 ಮತಗಳನ್ನು ಪಡೆದಿರುತ್ತಾರೆ. ಜೆ.ಡಿ.ಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ 845, ಆಮ್ ಆದಿ ಪಕ್ಷದ ಪ್ರಭಾಕರ ಪೂಜಾರಿ 640, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ 1119, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಮದಾಸ್ ಭಟ್ 323 ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಶೇಖರ್ ಹಾವಂಜೆ 435 ಮತಗಳನ್ನು ಪಡೆದಿರುತ್ತಾರೆ. 1316 ನೋಟಾ ಮತಗಳನ್ನು ಚಲಾಯಿಸಲಾಗಿರುತ್ತದೆ.

121- ಕಾಪು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು 80,559 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 13,004 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ವಿನಯ್ ಕುಮಾರ್ ಸೊರಕೆ ಅವರು 67,555 ಮತಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸಬಿನಾ ಸಮದ್ 568, ಆಮ್ ಆದ್ಮಿ ಪಕ್ಷದ ಎಸ್. ಆರ್ ಲೋಬೋ 252 ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಹಮ್ಮದ್ ಹನೀಫ್ 1,616 ಮತಗಳನ್ನು ಪಡೆದಿದ್ದು, ಕಾಪು ಕ್ಷೇತ್ರದಲ್ಲಿ ಒಟ್ಟು 805 ನೋಟಾ ಮತಗಳನ್ನು ಮತದಾರರು ಚಲಾಯಿಸಿರುತ್ತಾರೆ.

122-ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು 77,028 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 4,602 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ಉದಯ್ ಶೆಟ್ಟಿ ಮುನಿಯಾಲು ಅವರು 72,426 ಮತಗಳನ್ನು ಪಡೆದಿರುತ್ತಾರೆ. ಉಳಿದಂತೆ ಆಮ್ ಆದ್ಮಿ ಪಕ್ಷದ ಡೇನಿಯಲ್ ಫೆಡ್ರಿಕ್ ರೆಂಜರ್ 556, ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಪೂಜಾರಿ 281, ಪಕ್ಷೇತರ ಅಭ್ಯರ್ಥಿಗಳಾದ ಪ್ರಮೋದ್ ಮುತಾಲಿಕ್ 4,508, ಅರುಣ್ ದೀಪಕ್ ಮೆಂಡೋನ್ಸಾ 501, ಡಾ. ಮಮತಾ ಹೆಗ್ಡೆ 238, ವಿದ್ಯಾಲಕ್ಷ್ಮೀ 151 ಹಾಗೂ ಸುಧಾಕರ ಆಚಾರ್ಯ ಅವರು 233 ಮತಗಳನ್ನು ಪಡೆದಿದ್ದು, 921 ನೋಟಾ ಮತದಾನವಾಗಿರುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!