ಕೋಟ: ಮಣೂರು ಸರಕಾರಿ ಸಂಯುಕ್ತ ಪ್ರೌಢಶಾಲೆ ಇಲ್ಲಿನ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಮತ್ತು ಸ್ಟಾನ್ಪೊರ್ಡ್ ಯುನಿವರ್ಸಿಟಿ ಯುಎಸ್ಎ, ಫೋಲ್ಡ್ ಸ್ಕೋಪ್ ಇನಸ್ಟ್ರುಮೆಂಟ್ಸ್ ಸಂಸ್ಥೆ, ದಯಾಲಾಬಾಗ್ ಎಜುಕೇಶನ್ ಇನ್ಸ್ಟಿಟ್ಯೂಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿನ ಕಲಿಕಾಸಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಸರಳ ಮ್ಯೆಕ್ರೊಸ್ಕೋಪ್ ಮಾದರಿಯ ಸಾಧನ ಫೋಲ್ಡ್ ಸ್ಕೋಪ್ ಅನ್ನು ಉಚಿತವಾಗಿ ವಿತರಿಸಿ ಅದರ ಬಳಕೆಯ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಫೋಲ್ಡ್ ಸ್ಕೋಪ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಅಕ್ಷತಾ ಉಪಕರಣದ ಬಳಕೆಯ ಬಗ್ಗೆ ಪ್ರಾಯೋಗಿಕವಾದ ಮಾಹಿತಿಯನ್ನು ನೀಡಿದರು. ಗೀತಾನಂದ ಫೌಂಡೇಶನ್‌ನ ಸಂಯೋಜಕರಾದ ರವಿಕಿರಣ್, ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ನಾರಾಯಣ ಮೊಗವೀರ ಮತ್ತು ಶಿಕ್ಷಕಿ ಅಕ್ಷತಾ ಉಪಸ್ಥಿತರಿದ್ದರು.