ಬ್ರಹ್ಮಾವರ, ಮೇ 9: ಓ.ಎಸ್.ಸಿ ಎಜ್ಯುಕೇಶನಲ್ ಸೊಸೈಟಿ (ರಿ.) ಬ್ರಹ್ಮಾವರ ಇದರ ಆಡಳಿತಕ್ಕೊಳಪಟ್ಟ ಎಸ್.ಎಂ.ಎಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಬ್ರಹ್ಮಾವರ ಇದರ ಆಶ್ರಯದಲ್ಲಿ 19 ವರ್ಷಗಳ ಒಳಗಿನ ವಯೋಮಿತಿಯ ಆಹ್ವಾನಿತ ಕ್ರಿಕೆಟ್ ತಂಡಗಳ ‘ಎಸ್.ಎಮ್.ಎಸ್ ಕ್ರಿಕೆಟ್ ಲೀಗ್ 2023’ ರ ಪಂದ್ಯಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮ ಎಸ್.ಎಂ.ಎಸ್ ಕ್ರೀಡಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ರೆ.ಫಾ.ಎಮ್.ಸಿ ಮಥೈಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಎಂ.ಎಸ್ ಆರ್ಥೋಡಾಕ್ಸ್ ಚರ್ಚ್ ನ ಟ್ರಸ್ಟಿ ಮಿಲ್ಟನ್ ಒಲಿವೆರ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ಮಂಜುನಾಥ ಉಡುಪ, ಪದವಿ ಕಾಲೇಜಿನ ಕಾರ್ಯದರ್ಶಿ ಆಲ್ವರೀಸ್ ಡಿ’ಸಿಲ್ವ, ಕಾಲೇಜು ವಿಭಾಗದ ಆಡಳಿತ ಮಂಡಳಿಯ ಸದಸ್ಯರಾದ ಆಲ್ಬರ್ಟ್ ಡಿ’ಸಿಲ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಎಸ್. ಎಂ. ಎಸ್ ಕ್ರೀಡಾ ಮತ್ತು ಸಾಂಸ್ಕ್ರತಿಕ ಸಂಘದ ಕ್ರೀಡಾ ಕಾರ್ಯದರ್ಶಿ ಹೆರಿಕ್ ಡಿ’ಸೋಜ, ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ವೆಂಕಟೇಶ ಭಟ್, ಎಸ್. ಎಂ. ಎಸ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಘು ಕಾಡೂರು ಹಾಗೂ ಎಸ್.ಎಂ.ಎಸ್ ಕ್ರಿಕೆಟ್ ಕ್ಲಬ್ ನ ತರಬೇತುದಾರ ಲಿಂಗಪ್ಪ ಉಪಸ್ಥಿತರಿದ್ದರು. ಪಂದ್ಯಾಕೂಟದಲ್ಲಿ ಪ್ರಥಮ ಸ್ಥಾನವನ್ನು ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ತಂಡವು ಪಡೆಯಿತು, ಎಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ ದ್ವಿತೀಯ ಸ್ಥಾನವನ್ನು, ಯು.ಡಿ.ಸಿ.ಎ ಕ್ರಿಕೆಟ್ ಅಕಾಡೆಮಿ ಉಡುಪಿ ತೃತೀಯ ಸ್ಥಾನವನ್ನು ಮತ್ತು ಎಸ್ಎಂಎಸ್ ಕ್ರಿಕೆಟ್ ತಂಡವು ಚತುರ್ಥ ಸ್ಥಾನವನ್ನು ಪಡೆಯಿತು.
ಪಂದ್ಯಾಕೂಟದ ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ತಂಡದ ಪ್ರನಮ್ ಪಡೆದರು, ಎಚ್.ಜೆ.ಸಿ. ಕ್ರಿಕೆಟ್ ಕ್ಲಬ್ ನ ಶ್ರೇಯನ್ ಇವರು ಉತ್ತಮ ಬೌಲರ್ ಆಗಿ, ಎಸ್ಎಂಎಸ್ ಕ್ರಿಕೆಟ್ ಅಕಾಡೆಮಿಯ ಕೃಷ್ಣ ಉತ್ತಮ ಭರವಸೆಯ ಆಟಗಾರ ಪ್ರಶಸ್ತಿ ಪಡೆದರು ಮತ್ತು ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ಧೀರಜ್ ಆಯ್ಕೆಯಾದರು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾದ ರೇ. ಫಾ. ಲಾರೆನ್ಸ್ ಡಿ’ಸೋಜ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಎಸ್ಎಂಎಸ್ ಪದವಿಪೂರ್ವ ಕಾಲೇಜು ಬ್ರಹ್ಮಾವರ ಉಪನ್ಯಾಸಕರಾದ ವಿಜಯ ಆಳ್ವ, ಪದವಿ ಕಾಲೇಜಿನ ಕಾರ್ಯದರ್ಶಿ ಆಲ್ವರಿಸ್ ಡಿ’ಸಿಲ್ವ, ಎಸ್ಎಂಎಸ್ ಸಿಬಿಎಸ್.ಸಿ ವಿಭಾಗದ ಕಾರ್ಯದರ್ಶಿ ಲೂಯಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.