Monday, January 20, 2025
Monday, January 20, 2025

ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸರ್ವಸನ್ನದ್ಧವಾಗಿದೆ: ಉಡುಪಿ ಜಿಲ್ಲಾಧಿಕಾರಿ

ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸರ್ವಸನ್ನದ್ಧವಾಗಿದೆ: ಉಡುಪಿ ಜಿಲ್ಲಾಧಿಕಾರಿ

Date:

ಉಡುಪಿ, ಮೇ 9: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸರ್ವಸನ್ನದ್ಧವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 1111 ಮತಗಟ್ಟೆಗಳಲ್ಲಿ 243 ಮಂದಿ ಸೇವಾ ಮತದಾರರು ಸೇರಿದಂತೆ ಒಟ್ಟು 10,41,915 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನವು ಮೇ 10ರ ಬುಧವಾರ ಬೆಳಗ್ಗೆ 7:00ರಿಂದ ಸಂಜೆ 6:00 ಗಂಟೆಯವರೆಗೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 5,02,836 ಪುರುಷ, 5,38,823 ಮಹಿಳಾ ಮತದಾರರಲ್ಲದೇ 13 ಇತರ ಮತದಾರರೊಂದಿಗೆ ಒಟ್ಟು 243 ಸೇವಾ ಮತದಾರರು ಅಂದು ತಮ್ಮ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ 1,15,346 ಪುರುಷ, 1,20,319 ಮಹಿಳೆ, 3 ಇತರ ಹಾಗೂ 48 ಸೇವಾ ಮತದಾರರು ಸೇರಿದಂತೆ ಒಟ್ಟು 2,35,716 ಮತದಾರರಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ 1,00,751 ಪುರುಷ, 1,08,784 ಮಹಿಳಾ, 2 ಇತರ ಹಾಗೂ 55 ಸೇವಾ ಮತದಾರರು ಸೇರಿ ಒಟ್ಟು 2,09,592 ಮತದಾರರಿದ್ದಾರೆ. ಉಡುಪಿ ಕ್ಷೇತ್ರದಲ್ಲಿ 1,04,787 ಪುರುಷ, 1,12,148 ಮಹಿಳೆ, 3 ಇತರ ಹಾಗೂ 51 ಸೇವಾ ಮತದಾರರು ಸೇರಿ ಒಟ್ಟು 2,16,989 ಮತದಾರರು. ಕಾಪು ಕ್ಷೇತ್ರದಲ್ಲಿ 90,517 ಪುರುಷ, 98,430 ಮಹಿಳೆ, 5 ಇತರೆ, 55 ಸೇವಾ ಮತದಾರರು ಸೇರಿ ಒಟ್ಟು 1,89,007 ಮತದಾರರು ಹಾಗೂ ಕಾರ್ಕಳ ಕ್ಷೇತ್ರದಲ್ಲಿ 91,435 ಪುರುಷ, 99,142 ಮಹಿಳೆ, 0 ಇತರೆ, 34 ಸೇವಾ ಮತದಾರರು ಸೇರಿ ಒಟ್ಟು 1,90,611 ಮತದಾರರಿದ್ದಾರೆ.

ಇವರಿಗೆ ಮತ ಚಲಾಯಿಸಲು ಜಿಲ್ಲೆಯಲ್ಲಿ ಒಟ್ಟು 1,111 ಮತಗಟ್ಟೆಗಳನ್ನು ತೆರೆಯಲಾಗುವುದು. ಬೈಂದೂರಿನಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುವಿನಲ್ಲಿ 208 ಹಾಗೂ ಕಾರ್ಕಳದಲ್ಲಿ 209 ಮತಗಟ್ಟೆಗಳನ್ನು ತೆರೆಯಲಾಗಿದೆ.

ಮತದಾನಕ್ಕೆ ಬೇಕಾಗುವ ದಾಖಲೆಗಳು: ಮತದಾರರು ಬುಧವಾರ ತಮ್ಮ ಮತ ಚಲಾಯಿಸಲು ಆಗಮಿಸುವಾಗ ಮನೆ ಮನೆಗೆ ಈಗಾಗಲೇ ತಲುಪಿಸಿರುವ ಓಟರ್ ಸ್ಲಿಪ್ ಜೊತೆಗೆ ಗುರುತಿಗಾಗಿ ಮತದಾರ ಪತ್ರ (ಎಪಿಕ್ ಕಾರ್ಡ್‌)ನ್ನು ತರಬೇಕು. ಒಂದು ವೇಳೆ ಎಪಿಕ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿಸಿ ಚೀಟಿ, ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಆರೋಗ್ಯ ವಿಮಾ ಸ್ಮಾರ್ಟ್ ಕಾಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ಕಾರ್ಡ್, ವಿಶಿಷ್ಟ ಅಂಗವೈಕಲ್ಯ ಕಾರ್ಡ್‌ಗಳಲ್ಲಿ ಯಾವುದಾದರೂ ಒಂದನ್ನು ತರಬೇಕು.

ಈ ಸಾಲಿನ ಚುನಾವಣೆಗಾಗಿ ಮಹಿಳಾ ಮತಗಟ್ಟೆ ಅಧಿಕಾರಿಗಳಿಂದ ನಡೆಸುವ ಸಖೀ ಮತಗಟ್ಟೆ, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸುವ ಪಿಡಬ್ಲ್ಯುಡಿ ಮತಗಟ್ಟೆ ಹಾಗೂ ಎಥಿನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಐದರಂತೆ ಒಟ್ಟು 25 ಸಖಿ ಮತಗಟ್ಟೆಗಳೊಂದಿಗೆ ಕ್ಷೇತ್ರಕ್ಕೆ ತಲಾ ಒಂದರಂತೆ ಒಟ್ಟು ಐದು ಪಿಡಬ್ಲ್ಯುಜಿ ಮತಗಟ್ಟೆ, 5 ಯುವ ಮತದಾರರ ಮತಗಟ್ಟೆ, ಐದು ಥೀಮ್ ಆಧಾರಿತ ಮತಗಟ್ಟೆ ಹಾಗೂ ಕುಂದಾಪುರ ತಾಲೂಕಿನ ಸೌಡದಲ್ಲಿ ಕೊರಗ ಸಂಸ್ಕೃತಿ ಸಾರುವ ಎಥಿನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

80+ ವಯೋಮಾನದ ಹಿರಿಯ ಮತದಾರರು ಹಾಗೂ ವಿಶೇಷ ಚೇತನ ಮತದಾರರಿಗಾಗಿ ಗಾಲಿಕುರ್ಚಿ, ಭೂತಕನ್ನಡಿ, ಬೈಲ್ ಲಿಪಿ ಮಾದರಿಯ ಮತಪತ್ರ, ಪ್ರವೇಶದಲ್ಲಿ ಆದ್ಯತೆ, ರ್ಯಾಂಪ್, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಾಹೀರಾತು/ Advertisement

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!