ಕಾರ್ಕಳ, ಮೇ 2: ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 2023 ರಲ್ಲಿ ನಡೆದ ಪ್ರಥಮ ಹಂತದ ಎನ್.ಎ.ಟಿ.ಎ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ವರುಣ್ ಜಿ ನಾಯಕ್ 127, ದೀಕ್ಷಾ ಪಾಂಡು 123, ಸ್ಪರ್ಶ ಪಾರ್ಶ್ವನಾಥ್ 119, ಧರಿನಾಥ್ ಕುಂಬಾರ್ 118, ಸಹನಾ ಎನ್ ಸಿ 116 ಅಂಕ ಗಳಿಸಿದ್ದಾರೆ.
ಎನ್.ಎ.ಟಿ.ಎ ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ವಿದ್ಯಾರ್ಥಿಗಳಾದ ಅನ್ವಿತಾ ಕೆ., ಸ್ವಸ್ತಿಕ್ ಕೆ ಭಟ್, ಅನುಷಾ ಐನಾಪುರ, ಸಂತೃಪ್ತಿ, ಚಿರಾಗ್ ವಿ ಶೆಟ್ಟಿ, ಗುರುಲಿಂಗಯ್ಯ ಎಸ್ ಕಂಬಳಿಮಠ್, ಶ್ರವಣ್ ಎಸ್., ಸಂಜಯ್ ಎಸ್., ಪಂಕಜ್ ಜೈ ಪ್ರಸಾದ್, ಪ್ರೇಕ್ಷಾ, ನೇಹಾ ಮಯ್ಯ, ಪನ್ವಿತ್ ಜಿ. ಎನ್., ಚಿನ್ಮಯಿ ಎಸ್ ಶೆಟ್ಟಿ ಇವರು ಉತ್ತಮ ಅಂಕಗಳಿಸಿರುತ್ತಾರೆ.
ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಿಯುಸಿ ಪ್ರಥಮ ವರ್ಷದಿಂದಲೇ ವಿವಿಧ ಕೋರ್ಸ್ ಗಳಿಗೆ ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಎನ್.ಎ.ಟಿ.ಎ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ವಿದ್ಯಾ ಸಂಸ್ತೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರರು, ಪಿ.ಆರ್.ಒ ಲಿಶನ್ ಗೌಡ, ಎನ್.ಎ.ಟಿ.ಎ ಸಂಯೋಜಕರಾದ ಸುಮಂತ್ ದಾಮ್ಲೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.