ಮಣಿಪಾಲ. ಮೇ 2: ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಜತ ಮಹೋತ್ಸವದ ಅಂಗವಾಗಿ 01.05.2023ನೇ ಸೋಮವಾರದಿಂದ 07.05.2023ನೇ ಭಾನುವಾರದ ವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 4.00 ರವರೆಗೆ ವಿವಿಧ ರೀತಿಯ ತಲೆನೋವುಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ-‘ಊರ್ಧ್ವಂಗ ಕಲ್ಪ’ವನ್ನು ಶಾಲಾಕ್ಯತಂತ್ರ ವಿಭಾಗದಿಂದ ಆಯೋಜಿಸಲಾಗಿದೆ.
ಮುನಿಯಾಲ್ ಆಯುರ್ವೇದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ., ಶಾಲಾಕ್ಯತಂತ್ರ ವಿಭಾಗದ ಡಾ. ದಿನೇಶ್ ನಾಯಕ್ ಜೆ., ಡಾ. ನಿಶಿತಾ ಬಿ ಎಲ್., ಡಾ. ಸಹನಾ ಮತ್ತು ಶಿಬಿರದ ಮೇಲ್ವಿಚಾರಕಿ ಡಾ. ಪ್ರೀತಿ ಪಾಟೀಲ್ ಹಾಗೂ ಆಸ್ಪತ್ರೆಯ ಮೇಲ್ವಿಚಾರಕ ಡಾ. ಪ್ರಮೋದ್ ಶೇಟ್ ದೀಪ ಪ್ರಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ಸಂಸ್ಥೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ಮೇ 1 ರಿಂದ 7ರವರೆಗೆ ಬೆಳಿಗ್ಗೆ 9.00 ರಿಂದ ಅಪರಾಹ್ನ 4.00 ರವರೆಗೆ ನಡೆಯಲಿದ್ದು ಈ ಶಿಬಿರದಲ್ಲಿ ಉಚಿತ ತಪಾಸಣಾ ಹಾಗೂ ರಿಯಾಯಿತಿ ದರದಲ್ಲಿ ಆಯುರ್ವೇದ ಔಷಧಿಗಳು ಮತ್ತು ವಿವಿಧ ಕ್ರಿಯಾಕಲ್ಪಗಳು ಲಭ್ಯವಿರುತ್ತವೆ. ಕಣ್ಣಿನ ಪರೀಕ್ಷೆ, ಯೋಗ ಹಾಗೂ ಪಥ್ಯಾಹಾರ ಸಮಾಲೋಚನೆ ಉಚಿತವಾಗಿರುತ್ತದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಿ.