ಉಡುಪಿ, ಏ. 20: ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ವೀಕ್ಷಕ ತುಕಾರಾಂ ಹರಿಬಾಹು ಮುಂಡೆ ಅವರು ಗುರುವಾರ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಸಿಎಂಸಿ, ಸೋಷಿಯಲ್ ಮೀಡಿಯಾ ಸೆಂಟರ್, ಸೀ ವಿಜಿಲ್ ಕಾರ್ಯ ನಿರ್ವಹಣೆ, ದೂರು ನಿರ್ವಹಣಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಕಳ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಆಂಧ್ರ ವಂಶಿ, ಪೊಲೀಸ್ ವೀಕ್ಷಕಿ ಬಿನಿತಾ ಠಾಕೂರ್, ವೆಚ್ಚ ವೀಕ್ಷಕ ಅಂಕಿತ್ ಸೋಮನಿ, ಗೋರ್ಸೆ ಪ್ರಸಾದ್ ದತ್ತಾತ್ರೇಯ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಮತ್ತಿತರರು ಉಪಸ್ಥಿತರಿದ್ದರು.