ಉಡುಪಿ, ಏ. 20: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ, ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಕ್ಕೆ ಐ.ಎ.ಎಸ್. ಅಧಿಕಾರಿ ತುಕಾರಾಂ ಹರಿಭಾವು ಮುಂಡೆ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಐ.ಎ.ಎಸ್. ಅಧಿಕಾರಿ ಆಂದ್ರ ವಂಶಿ, ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಐ.ಎ.ಎಸ್. ಅಧಿಕಾರಿ ಅಣ್ಣವಿ ದಿನೇಶ್ ಕುಮಾರ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ಹಾಗೂ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ವೆಚ್ಚದ ವೀಕ್ಷಕರಾಗಿ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಗೊರಾಸೆ ಪ್ರಸಾದ್ ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.
ತುಕಾರಾಂ ಹರಿಭಾವು ಮುಂಡೆ ಅವರನ್ನು, ಉಡುಪಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-1 ರಲ್ಲಿ ಮಧ್ಯಾಹ್ನ 4 ರಿಂದ 5 ರವರೆಗೆ (ಮೊ.94817 03751, 0820-2003023) ಆಂದ್ರ ವಂಶಿ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-ಎ ರಲ್ಲಿ ಬೆಳಗ್ಗೆ 9 ರಿಂದ 10 ರ ವರೆಗೆ (ಮೊ.94815 45147, 0820-2003025), ಅಣ್ಣವಿ ದಿನೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-ಬಿ ರಲ್ಲಿ ಬೆಳಗ್ಗೆ 9 ರಿಂದ 10 ರ ವರೆಗೆ (ಮೊ.87628 82841, 0820-2003021) ಹಾಗೂ ಗೊರಾಸೆ ಪ್ರಸಾದ್ ದತ್ತಾತ್ರೇಯ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-ಸಿ1 ರಲ್ಲಿ ಬೆಳಗ್ಗೆ 10 ರಿಂದ 11 ರ ವರೆಗೆ (ಮೊ.91413 58273, 0820-2003024) ನಲ್ಲಿ ಸಾರ್ವಜನಿಕರು/ಜನಪ್ರತಿನಿಧಿಗಳು ಭೇಟಿ ಮಾಡಿ, ಚುನಾವಣಾ ವೆಚ್ಚ ಸಂಬಂಧಿ ದೂರುಗಳನ್ನು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.