ಉಡುಪಿ, ಏ. 20: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಜಿಲ್ಲೆಯಲ್ಲಿ 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ ಯಿಂದ ಗುರುರಾಜ ಶೆಟ್ಟಿ, ಕಾಂಗ್ರೆಸ್ ಪಕ್ಷದ ಕೆ. ಗೋಪಾಲ ಪೂಜಾರಿ, ಆಮ್ ಆದ್ಮಿ ಪಕ್ಷದಿಂದ ರಮಾನಂದ ಪ್ರಭು, ರಾಷ್ಟ್ರೀಯ ಸಮಾಜ ದಳ (ಆರ್) ಪಕ್ಷದ ಮಂಜುನಾಥ ಕೆ, ಪಕ್ಷೇತರರಾಗಿ ಶ್ಯಾಮಾ ಬಿ, ಹೆಚ್.ಸುರೇಶ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ (ಜಾತ್ಯಾತೀತ) ಪಕ್ಷದ ರಮೇಶ್, ಆಮ್ ಆದ್ಮಿ ಪಕ್ಷದಿಂದ ಚಂದ್ರ ಹರಿಜನ, ಪಕ್ಷೇತರ ಅಭ್ಯರ್ಥಿ ಜಯರಾಜ ನಾಮಪತ್ರ ಸಲ್ಲಿಸಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ ಯಿಂದ ಯಶ್ಪಾಲ್, ಆಮ್ ಆದ್ಮಿ ಪಕ್ಷದಿಂದ ಪ್ರಭಾಕರ ರಾಮ ಸಾಲ್ಯಾನ್ ಮತ್ತು ದೀನಾ ಪ್ರಭಾಕರ ಸಾಲ್ಯಾನ್ ನಾಮಪತ್ರ ಸಲ್ಲಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ವಿನಯ್ ಕುಮಾರ್ ಸೊರಕೆ, ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಹಮದ್ ಹನೀಫ್, ಆಮ್ ಆದ್ಮಿ ಪಕ್ಷದಿಂದ ಸ್ಟೀಫನ್ ರಿಚರ್ಡ್ ಲೋಬೋ, ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಹಿಮಾನ್ ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ದ ಉದಯ ಕುಮಾರ್ ಎಂ, ಪಕ್ಷೇತರ ಆಭ್ಯರ್ಥಿಗಳಾದ ಕೃಷ್ಣ ಶೆಟ್ಟಿ, ಪ್ರಮೋದ್ ಮುತಾಲಿಕ್, ಕೆ.ಹರೀಶ್ ಅಧಿಕಾರಿ ನಾಮಪತ್ರ ಸಲ್ಲಿಸಿದ್ದಾರೆ.