ಬ್ರಹ್ಮಾವರ, ಏ. 20: ರೋಟರಿ ಕ್ಲಬ್ ಬಾರ್ಕೂರು, ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್ ಕ್ರಾಸ್, ಎನ್.ಸಿ.ಸಿ, ರೋವರ್ಸ್ ರೇಂಜರ್ಸ್ ಘಟಕಗಳು ಹಾಗೂ ಕೆ.ಎಂ.ಸಿ ರಕ್ತ ನಿಧಿ ವಿಭಾಗ ಮಣಿಪಾಲ, ಯುವ ವಾಹಿನಿ (ರಿ.) ಯಡ್ತಾಡಿ ಘಟಕ, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಶಿವಗಿರಿ ಕ್ಷೇತ್ರ ಬಾರ್ಕೂರು, ಮೊಗವೀರ ಯುವಕ ಸಂಘ ಬೆಣ್ಣೆಕುದ್ರು, ಅತುಲ ಯುವಕ ಸಂಘ ಹೇರಾಡಿ, ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಬಾರ್ಕೂರು, ದುರ್ಗಾಂಬ ಫ್ರೆಂಡ್ಸ್ ರಂಗನಕೆರೆ, ಕೋಟಿ ಚೆನ್ನಯ್ಯ ಬಿಲ್ಲವ ಯುವ ವೇದಿಕೆ ಬೆಣ್ಣೆಕುದ್ರು, ಜೆ.ಸಿ.ಐ ಕಲ್ಯಾಣಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾಲೇಜಿನ ರೂಸಾ ಸಭಾಂಗಣದಲ್ಲಿ ನಡೆಯಿತು. ನಿಶ್ಚಿತಾ ಮತ್ತು ತಂಡದವರಿಂದ ರೆಡ್ ಕ್ರಾಸ್ ಪರಿಕಲ್ಪನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ರೋಟರಿ ಮಾಜಿ ಅಧ್ಯಕ್ಷರಾದ ಸುಧಾಕರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾರ್ಕೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಪೂಜಾರಿ ಉದ್ಘಾಟನೆ ನೆರವೇರಿಸಿದರು. ಗೌರವಾನ್ವಿತ ಅತಿಥಿಗಳಾಗಿ ಕೆ.ಎಂ.ಸಿ ಮಣಿಪಾಲ ರಕ್ತನಿಧಿ ವಿಭಾಗದ ನಿರ್ದೇಶಕಿ ಡಾ. ಶಮಿ ಶಾಸ್ತ್ರಿ, ಆನಂದ ಶೆಟ್ಟಿ, ಎ. ಜಿ. ರೋಟರಿ ಜಿಲ್ಲೆ ೩೧೮೨ ವಲಯ ೩, ನಾರಾಯಣ್ ಆಚಾರ್, ವಲಯ ಪ್ರತಿನಿಧಿಗಳು ರೋಟರಿ ಜಿಲ್ಲೆ 3182 ವಲಯ 3, ಸತೀಶ್ ಎಸ್ ಅಮೀನ್, ಅಧ್ಯಕ್ಷರು ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಬಾರ್ಕೂರು, ರಾಜು ಪೂಜಾರಿ, ನಿಕಟಪೂರ್ವ ಅಧ್ಯಕ್ಷರು ಯುವ ವಾಹಿನಿ (ರಿ.) ಯಡ್ತಾಡಿ ಘಟಕ, ಸುಧಾಕರ ಪೂಜಾರಿ, ಅಧ್ಯಕ್ಷರು ಅತುಲ ಯುವಕರ ಸಂಘ ಹೇರಾಡಿ, ಅಕ್ಷಯ ನಾಯಕ್, ಅಧ್ಯಕ್ಷರು ದುರ್ಗಾಂಬ ಫ್ರೆಂಡ್ಸ್ ರಂಗನಕೆರೆ, ನಿಖಿಲ್ ಮೈಂದನ್, ಅಧ್ಯಕ್ಷರು ಮೊಗವೀರ ಯುವಕರ ಸಂಘ ಬೆಣ್ಣೆಕುದ್ರು, ಉದಯ ಪೂಜಾರಿ, ಅಧ್ಯಕ್ಷರು ಕೋಟಿ ಚೆನ್ನಯ್ಯ ಬಿಲ್ಲವ ಯುವ ವೇದಿಕೆ ಬೆಣ್ಣೆಕುದ್ರು ಹಾಗೂ ಅನಿತ ನರೇಂದ್ರ ಕುಮಾರ್, ಅಧ್ಯಕ್ಷರು ಜೆ.ಸಿ.ಐ
ಕಲ್ಯಾಣಪುರ ಆಗಮಿಸಿದ್ದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ವಿದ್ಯಾ ಪಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಸಿ ಕೆ., ಯುವ ರೆಡ್ ಕ್ರಾಸ್ ಘಟಕ-1 ಸಂಚಾಲಕಿ ಅಕ್ಷತಾ ಎಸ್., ಯುವ ರೆಡ್ ಕ್ರಾಸ್ ಘಟಕ-2 ಸಂಚಾಲಕ ಡಾ. ಚಂದ್ರಪ್ಪ ಹೆಚ್., ಎನ್.ಸಿ.ಸಿ ಘಟಕ ಸಂಚಾಲಕ ಸುದಿನ ಟಿ ಎ., ಎನ್.ಎಸ್.ಎಸ್ ಘಟಕ-1 ಸಂಚಾಲಕಿ ಶೃತಿ ಆಚಾರ್ಯ, ಎನ್.ಎಸ್.ಎಸ್ ಘಟಕ-2 ಸಂಚಾಲಕ ರಾಧಾಕೃಷ್ಣ ನಾಯಕ್, ರೋವರ್ಸ್ ಘಟಕ ಸಂಚಾಲಕ ಕಾರ್ತಿಕ್ ಪೈ, ರೇಂಜರ್ಸ್ ಘಟಕ ಸಂಚಾಲಕಿ ನಂದಿನಿ ಸಿ ಉಪಸ್ಥಿತರಿದ್ದರು.
ರಕ್ತದಾನಿಗಳಾದ ಸಂದೀಪ್ ಅಮೀನ್ ಕೂರಾಡಿ ಹಾಗೂ ಪ್ರಕಾಶ್ ಪೂಜಾರಿ ಇವರನ್ನು ರೋಟರಿ ಕ್ಲಬ್ ಬಾರ್ಕೂರು ವತಿಯಿಂದ ಸನ್ಮಾನಿಸಲಾಯಿತು. ಚರಣ್ ಕಾರ‍್ಯಕ್ರಮ ನಿರೂಪಣೆ ಮಾಡಿದರು. ಡಾ. ಚಂದ್ರಪ್ಪ ಹೆಚ್ ಸ್ವಾಗತಿಸಿ, ಗಂಗಾಧರಯ್ಯ ವಂದಿಸಿದರು. ಅಕ್ಷತಾ ಎಸ್ ಮುಖ್ಯ ಅತಿಥಿಗಳು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಒಟ್ಟು 110ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.