ಬ್ರಹ್ಮಾವರ, ಏ. 18: ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರದ ಹೆಚ್. ಆರ್. ಡಿ. ಸೆಲ್ ಹಾಗೂ ಎಂ.ಐ.ಟಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲಗಳ ಮಾಹಿತಿ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ ಲರ್ನಿಂಗ್ ಇನ್ನಿವಷನ್ & ಕಂಟೆಂಟ್ ಡಿಜಿಟಲ್ ಸೊಲ್ಯೂಷನ್ಸ್ ಇದರ ನಿರ್ದೇಶಕರಾಗಿರುವ ದರ್ಶನ ಪಾಟೀಲ್ ಹಾಗೂ ಮ್ಯಾನೇಜರ್ ಮಧುಚಂದ್ರ ಕೊಟ್ಟಾರಿ ಆಗಮಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಹೆಚ್ಚುವರಿ ನಿರ್ದೇಶಕರಾದ ಡಾ. ರಾಜಶೇಖರ್ ಹೆಬ್ಬಾರ್ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಆಲ್ವರಿಸ್ ಡಿ ಸಿಲ್ವ, ಹೆಚ್. ಆರ್. ಡಿ. ಸೆಲ್ ನ ಸಂಯೋಜಕರಾದ ಟ್ವೀನಿ ಮರಿಯಾ ರೋಡ್ರಿಗಸ್ ಉಪಸ್ಥಿತರಿದ್ದರು.