ಕುಂದಾಪುರ, ಏ.10: ಗೋವಿಂದದಾಸ ಕಾಲೇಜು ಸುರತ್ಕಲ್‌ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಶಶಿಪ್ರಭಾ ಪರಿಣಯ’ ಪ್ರಸಂಗ ಸಮಗ್ರ ಪ್ರಶಸ್ತಿ ಪಡೆದಿದೆ. ತಂಡದಲ್ಲಿ ಭ್ರಮರಕುಂತಳೆ ಪಾತ್ರಧಾರಿ ಪ್ರಥಮ ಬಿ.ಸಿ.ಎ. ಪೂಜಾ ಆಚಾರ್ ತೆಕ್ಕಟ್ಟೆ, ಮಾರ್ತಾಂಡತೇಜ ಪಾತ್ರಧಾರಿ ಅಂತಿಮ ಬಿ.ಕಾಂ. ಡಿ. ವಿಭಾಗದ ಶ್ರೀನಿಧಿ ಖಾರ್ವಿ, ಹಾಸ್ಯ ಪಾತ್ರಧಾರಿ ದ್ವಿತೀಯ ಬಿ.ಎಸ್ಸಿ.ಯ ಲಕ್ಷ್ಮೀಕಾಂತ್ ಶೆಟ್ಟಿ ವೈಯಕ್ತಿಕ ಪ್ರಶಸ್ತಿ ಪಡೆದರು.
ಉಳಿದಂತೆ ಮುಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಪವಿತ್ರ ಪೈ., ಅಂಕಿತಾ ಸಿ. ಶೇಟ್, ಶ್ವೇತಾ ಪೂಜಾರಿ, ನಿಖಿಲ್ ಬಾರಾಳಿ, ಭರತ್ ಶೆಟ್ಟಿಗಾರ್, ದರ್ಶನ್ ಕುಮಾರ್ ಶೆಟ್ಟಿ, ಗುರುರಾಜ್ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಆಚಾರ್ ಬಿಲ್ಲಾಡಿ, ಚಂಡೆಯಲ್ಲಿ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಮದ್ದಳೆಯಲ್ಲಿ ಅಕ್ಷಯ್ ಆಚಾರ್ ಬಿದ್ಕಲ್‌ಕಟ್ಟೆ ಸಹಕರಿಸಿದರು. ಯಕ್ಷಗುರು ಐರೋಡಿ ಮಂಜುನಾಥ್ ಕುಲಾಲ್, ಉಪನ್ಯಾಸಕಿ ಸುಶ್ಮಿತಾ ಸಾಲಿಗ್ರಾಮ ತರಬೇತಿ ನೀಡಿದ್ದರು.
ಕಾಲೇಜಿನ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಹಾಗೂ ಬೋಧಕ-ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.