Saturday, November 23, 2024
Saturday, November 23, 2024

ಸಕ್ಕಟ್ಟು: ಆಳುಪ ದೊರೆ ವೀರ ಪಾಂಡ್ಯನ ಶಾಸನ ಪತ್ತೆ

ಸಕ್ಕಟ್ಟು: ಆಳುಪ ದೊರೆ ವೀರ ಪಾಂಡ್ಯನ ಶಾಸನ ಪತ್ತೆ

Date:

ಬ್ರಹ್ಮಾವರ, ಏ. 5: ಬ್ರಹ್ಮಾವರ ತಾಲ್ಲೂಕು, ಶಿರಿಯಾರ ಗ್ರಾಮದ ಸಕ್ಕಟ್ಟು ಪ್ರದೇಶದಲ್ಲಿ ಆಳುಪ ದೊರೆ ವೀರ ಪಾಂಡ್ಯನ‌ ಶಾಸನವನ್ನು ಹವ್ಯಾಸಿ ಇತಿಹಾಸ ಸಂಶೋಧಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಅವರ ಮಾಹಿತಿಯ ಮೇರೆಗೆ ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್ ಇಲ್ಲಿನ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ.

ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕೊಳ್ಕೆಬೈಲು ಗದ್ದೆಯಲ್ಲಿ ಪತ್ತೆಯಾಗಿದ್ದು, ಕನ್ನಡ‌ ಲಿಪಿ ಮತ್ತು ಭಾಷೆಯಲ್ಲಿದೆ. ಶಾಸನದ ಹೆಚ್ಚಿನ ಸಾಲುಗಳು ತೃಟಿತಗೊಂಡಿದ್ದು, ಕೇವಲ 12 ಸಾಲುಗಳು ಭಾಗಶಃ ಕಂಡುಬರುತ್ತದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದ್ದು, ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ರಾಜಕತ್ತಿ, ನಂದಾದೀಪ ಮತ್ತು ನಂದಿಯ ಉಬ್ಬು ಕೆತ್ತನೆಯಿದೆ. “ಸ್ವಸ್ತಿಶ್ರೀ” ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1266 ನೆಯ ತಾರಣ ಸಂವತ್ಸರದ ಶ್ರಾವಣ ಬಹುಳ 13 ಸಿಂಹಮಾಸ ವಡ್ಡವಾರ (ಗುರುವಾರ) ಎಂಬ ಕಾಲಮಾನವನ್ನು ಉಲ್ಲೇಖಿಸಿದ್ದು, ಇದು ಸಾಮಾನ್ಯ ವರ್ಷ 1344 ಕ್ಕೆ ಸರಿಹೊಂದುತ್ತದೆ. ಶಾಸನದಲ್ಲಿ ಆಳುಪ ದೊರೆ ವೀರ ಪಾಂಡ್ಯದೇವನನ್ನು‌ “ಶ್ರೀ ಪಾಂಡ್ಯ ಚಕ್ರವರ್ತಿ, ಯರಿರಾಯ ಬಸವಸಂಕರ, ರಾಯಗಜಾಂಕುಸ” ಎಂಬ ಬಿರುದಿನಿಂದ ಉಲ್ಲೇಖಿಸಿರುವುದನ್ನು‌ ಕಾಣಬಹುದಾಗಿದೆ ಎಂದು ಸಂಶೋಧಕರು‌ ತಿಳಿಸಿದ್ದಾರೆ.‌

ಪ್ರಸ್ತುತ ಈ ಶಾಸನವನ್ನು ಜೀರ್ಣೋದ್ಧಾರದಲ್ಲಿರುವ ಸಕ್ಕಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಸಂರಕ್ಷಣಾ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗಿದೆ.‌ ಪಾದೂರು ಗುರುರಾಜ್ ಭಟ್ ಅವರು ತಮ್ಮ ಮಹಾಪ್ರಬಂಧವಾದ ‘ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್’ನಲ್ಲಿ ದೇವಾಲಯದಲ್ಲಿನ ಶ್ರೀಧರ ವಿಗ್ರಹದ (12-13ನೇ ಶತಮಾನ) ಬಗ್ಗೆ ಉಲ್ಲೇಖ ನೀಡಿದ್ದು, ಈ ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ‌ ಕೆತ್ತನೆಯನ್ನು ಕಾಣಬಹುದು‌. ಮಾತ್ರವಲ್ಲದೇ ದೇವಾಲಯದ ಹೊರ ಭಿತ್ತಿಯಲ್ಲಿ 15-16ನೇ ಶತಮಾನಕ್ಕೆ‌ ಸೇರಿರುವ ವರ್ಣಚಿತ್ರಗಳ ಅವಶೇಷಗಳನ್ನು ನೋಡಬಹುದು. ದೇವಾಲಯದ ಹೊರಭಾಗದಲ್ಲಿ ‌ಇನ್ನೊಂದು ಶಾಸನವಿದ್ದು, ಇದು ಸಂಪೂರ್ಣವಾಗಿ ತೃಟಿತಗೊಂಡಿರುತ್ತದೆ.

ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ,‌ಇದರ ಅಧ್ಯಯನ ‌ನಿರ್ದೇಶಕ ಎಸ್‌. ಎ. ಕೃಷ್ಣಯ್ಯ ಮತ್ತು ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮುಖ್ಯಸ್ಥರಾದ ಎಸ್.‌ ರಘುರಾಮ ರಾವ್ ಅವರ ಮಗ ಎಸ್. ಗೋಪಾಲಕೃಷ್ಣ ರಾವ್ ಅವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!