ಮಣಿಪಾಲ, ಏ. 2: ಮೈ ಟ್ರು ಸ್ಕಿಲ್ಸ್, ಆಸರೆ ಹಾಗೂ ಮಾಹೆ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನ ಮಕ್ಕಳ ಶಿಕ್ಷಕರು, ಪಾಲಕರು ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡಲು ಅಂತರ್ಗತ ಶಿಕ್ಷಣ ಹಾಗೂ ಕೌಶಲ ತರಬೇತಿ ಕಾರ್ಯಾಗಾರ ಮಣಿಪಾಲದ ಮಾಹೆಯ ಇಂಟರಾಕ್ಟ್ ಹಾಲ್ ನಲ್ಲಿ ನಡೆಯಿತು. ಮಾಹೆ ಡೀನ್ ಡಾ. ಪದ್ಮರಾಜ್ ಹೆಗ್ಡೆ ಉದ್ಘಾಟನೆ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ನೀನ ರಾವ್ ಅವರ ಮೈಂಡ್ ಸ್ಕೇಪ್ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಉಡುಪಿ ಜಿಲ್ಲೆಯ ವಿಶೇಷ ಚೇತನ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ರವೀಂದ್ರ, ಆಸರೆಯ ನಿರ್ದೇಶಕರಾದ ಜಯವಿಠ್ಠಲ್, ಮಾಹೆಯ ಡೈರಕ್ಟರ್ ಹನರಲ್ ಕರ್ನಲ್ ಪ್ರಕಾಶ್ ಚಂದ್ರ, ಪ್ರಸನ್ನ ಸ್ಕೂಲ್ ಆಫ್ ಹೆಲ್ತ್ ಸೈನ್ಸ್ ನ ಅಸಿಸ್ಟಂಟ್ ಪ್ರೊಫೆಸರ್ ಐಡ ಡಿಸೋಜ, ‘ಮೈ ಟ್ರು ಸ್ಕಿಲ್ಸ್’ ನ ಸಂಸ್ಥಾಪಕಿ ಸುಪರ್ಣ ಮಣಿಪಾಲ್ ಹಾಗೂ ನಿರ್ದೇಶಕ ಡಾ. ಪ್ರಣವ್ ಪ್ರಕಾಶ್ ಉಪಸ್ಥಿತರಿದ್ದರು. ಸ್ಮಿತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.