Thursday, November 28, 2024
Thursday, November 28, 2024

ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ, ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ, ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Date:

ಉಡುಪಿ, ಮಾ. 29: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ, ಉಡುಪಿ ಜಿಲ್ಲಾ ಘಟಕ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವು ಇಂದು ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುಜಿ.ಎವಿ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಜ್ಯ ಶಾಖೆ ಆಡಳಿತ ಮಂಡಳಿ ಸದಸ್ಯ ಲಯನ್ ಪಿಎಮ್‌ಜೆಎಫ್ ವಿ.ಜಿ. ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕವು ಮಾನವೀಯ ನೆಲೆಯಲ್ಲಿ ಮಾಡುತ್ತಿರುವ ಸಮಾಜ ಮುಖಿ ಸೇವೆಗಳ ಬಗ್ಗೆ ವಿವರಿಸಿ, ಕ್ಯಾನ್ಸರ್ ಬಗ್ಗೆ ವಿದ್ಯಾರ್ಥಿನಿಯರಿಗೆ ಜಾಗೃತಿಯನ್ನು ಮೂಡಿಸಿ, ರೋಗಿಗಳನ್ನು ಪತ್ತೆ ಹಚ್ಚಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಸ್ಥೈರ್ಯ ತುಂಬಬೇಕು. ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಎಸ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ, ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯ ಟಿ. ಚಂದ್ರಶೇಖರ್ ಹಾಗೂ ಯುವ ರೆಡ್‌ಕ್ರಾಸ್ ಪ್ರೋಗ್ರಾಮ್ ಆಫೀಸರ್ ಪ್ರೊ. ಶೋಭಾ ಆರ್ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್...

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ,...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...
error: Content is protected !!