ಕುಂದಾಪುರ, ಮಾ. 28: ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ರಾಯಲ್ ಸಭಾಭವನದ ಬಳಿಯ ಸ್ಯಾಬ್ರಮಕ್ಕಿಯಲ್ಲಿರುವ ಶ್ರೀ ನಾಗಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವಸ್ಥಾನದ 8ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವವು ಎ.1 ರಂದು ವೇ.ಮೂ. ನಾರಾಯಣ ಹೊಳ್ಳರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಅಂದು ಬೆಳಿಗ್ಗೆ 7.30ಕ್ಕೆ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ಶ್ರೀ ನಾಗದೇವರಿಗೆ, ಬೊಬ್ಬರ್ಯ, ಹ್ಯಾಗುಳಿ ಮತ್ತು ಶ್ರೀ ಕೀಳು ದೇವರಿಗೆ ಕಲಶ ಸ್ಥಾಪನೆ, ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿರುವುದು. ಬೆಳಿಗ್ಗೆ 10 ರಿಂದ ‘ನಾಗದರ್ಶನ’ ಕಾರ್ಯಕ್ರಮ ನಾಗಪಾತ್ರಿಗಳಾದ ಬೀಜಾಡಿ ಶಂಕರನಾರಾಯಣ ಬಾಯರಿ ಇವರಿಂದ ನಡೆಯಲಿದೆ.
ಮಧ್ಯಾಹ್ನ 12:00 ಗಂಟೆಗೆ ‘ಪಲ್ಲ ಪೂಜೆ’ ಹಾಗೂ 12:30ಕ್ಕೆ ಸಾರ್ವಜನಿಕ ಮಹಾ ‘ಅನ್ನ ಸಂತರ್ಪಣೆ’ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ, ಮದ್ದುಗುಡ್ಡೆ- ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಯಿಂದ ವಿಶೇಷ ‘ರಂಗಪೂಜೆ’ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ರಿಂದ ಗೋಳಿಗರಡಿ ಮೇಳ ಸಾಸ್ತಾನ ಇವರಿಂದ ‘ಗೋಳಿಗರಡಿ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ವಿ. ಅಣ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.