ಬ್ರಹ್ಮಾವರ, ಮಾ. 21: ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿನ ಬೋಧಕೇತರ ಸಿಬ್ಬಂದಿಗಳಿಗೆ ಒಂದು ದಿನದ ಕೌಶಲ್ಯಾಭಿವೃದ್ದಿ ಕಾರ‍್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ ಇಲ್ಲಿನ ಕಛೇರಿ ಅಧೀಕ್ಷಕಿ ವಿಜಯಲಕ್ಷ್ಮಿ ಶೆಡ್ತಿ ಭಾಗವಹಿಸಿದ್ದರು.
ಕಛೇರಿ ನಿರ್ವಹಣೆ ಮತ್ತು ನೈಪುಣ್ಯತೆ ಬಗ್ಗೆ ಮಾತನಾಡಿ, ಕಛೇರಿ ನಿರ್ವಹಣೆಯಲ್ಲಿ ಅಚ್ಚುಕಟ್ಟು, ಕ್ಲಪ್ತತೆ ಹಾಗೂ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುವಲ್ಲಿ ಬೋಧಕೇತರ ಸಿಬ್ಬಂದಿಯವರು ಮುಖ್ಯಪಾತ್ರ ವಹಿಸುತ್ತಾರೆ ಮಾತ್ರವಲ್ಲದೆ ಸಿಬ್ಬಂದಿಗಳು ಸೇವೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾಲೇಜು ವಿಭಾಗದ ಕಾರ್ಯದರ್ಶಿಅಲ್ವಾರಿಸ್ ಡಿ’ಸಿಲ್ವ ಹಾಗೂ ಕಛೇರಿ ಅಧೀಕ್ಷಕಿ ರೋಸ್ ಮರಿಯಾ ರೋಡ್ರಿಗಸ್ ಉಪಸ್ಥಿತರಿದ್ದರು. ವೈಲೆಟ್ ಲೂವಿಸ್ ಸ್ವಾಗತಿಸಿ, ಸೃಜನಿ ಕಾರ್ಯಕ್ರಮ ನಿರೂಪಿಸಿದರು.