ಉಡುಪಿ, ಮಾ. 7: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ನೀರಾವರಿ ಘಟಕಕ್ಕೆ ಎಲ್ಲಾ ವರ್ಗದ ರೈತರಿಂದ 2 ಹೆ. ವರೆಗೆ ಶೇ. 90 ಹಾಗೂ 2 ಹೆ. ನಿಂದ 5 ಹೆ. ವರೆಗೆ ಶೇ. 45 ರ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಆಧಾರ್ ಪ್ರತಿ, ಪಹಣಿ ಪತ್ರ, ಬ್ಯಾಂಕ್ ಖಾತೆ ಪ್ರತಿ, ಛಾಪಾ ಕಾಗದ, ಜಾತಿ ಪ್ರಮಾಣ ಪತ್ರ, ನೀರಿನ ಲಭ್ಯತೆಯ ಪ್ರಮಾಣ ಪತ್ರ, ತೋಟಗಾರಿಕೆ, ರೇಷ್ಮೆ ಇಲಾಖೆಯ ಸದರಿ ಘಟಕಕ್ಕೆ ಸಹಾಯಧನ ಪಡೆಯದಿರುವ ಬಗ್ಗೆ ದೃಢೀಕರಣ ಪತ್ರ, ಕಂದಾಯ ಇಲಾಖೆಯಿಂದ ಪಡೆದ ಸಣ್ಣ, ಅತಿಸಣ್ಣ ರೈತರ ಹಿಡುವಳಿ ಪ್ರಮಾಣ ಪತ್ರ, ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಂಬಂಧಪಟ್ಟ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.