Tuesday, January 21, 2025
Tuesday, January 21, 2025

ಮಣಿಪಾಲ: ರೋಟರಿ ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ

ಮಣಿಪಾಲ: ರೋಟರಿ ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ

Date:

ಉಡುಪಿ, ಫೆ. 24: ರೋಟರಿ ವಲಯ 4ರ ಎಲ್ಲ ಕ್ಲಬ್ ಗಳು ಮಣಿಪಾಲ ಮಾಹೆಯ ಅಂತಾರಾಷ್ಟ್ರೀಯ ಸಹಯೋಗ ಕಚೇರಿಯ ಸಹಕಾರದೊಂದಿಗೆ ರೋಟರಿ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ ಮಾಹೆಯ ಡಾ. ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆಯಿತು. ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸೇವೆ ಮತ್ತು ಸ್ನೇಹದ ಉದ್ಧೇಶದಿಂದ ಅಮೇರಿಕದಲ್ಲಿ ಪ್ರಾರಂಭವಾದ ಈ ಸೇವಾ ಸಂಸ್ಥೆಯು ಇನ್ನೂರಕ್ಕೂ ಮಿಕ್ಕಿ ದೇಶಗಳಲ್ಲಿ ವ್ಯಾಪಿಸಿ ತನ್ನ ಸೇವಾ ಚಟುವಟಿಕೆಗಳ ಮೂಲಕ ಜಗತ್ತಿನ ಶ್ರೇಷ್ಠ ಸೇವಾ ಸಂಸ್ಥೆಯಾಗಿ ಗುರುತಿಸಲ್ಪಟ್ಟು ವಿಶ್ವ ಶಾಂತಿಗಾಗಿ ದುಡಿಯುತ್ತಿದೆ. ಎಲ್ಲಾ ರೋಟರಿ ಸದಸ್ಯರು ಒಬ್ಬರನೊಬ್ಬರನ್ನು ಅರಿತುಕೊಂಡರೆ ವಿಶ್ವ ಶಾಂತಿಗೆ ತಮ್ಮ ಕೊಡುಗೆ ನೀಡಲು ಸಾದ್ಯ ಎಂದರು.

ಮಾಹೆಯ ಸಹಕುಲಪತಿಗಳಾದ ಪ್ರೊ.ಎನ್.ಎನ್.ಶರ್ಮ ಅವರು ಮಾಹೆಯು ರೋಟರಿಯ ಈ ವಿಶೇಷ ದಿನಾಚರಣೆಯಲ್ಲಿ ಭಾಗವಹಿಸುವಕ್ಕೆ ಹರ್ಷ ವ್ಯಕ್ತಪಡಿಸಿ ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು. ಮಾಹೆಯ ಅಂತಾರಾಷ್ಟ್ರೀಯ ಸಹಯೋಗ ಕಚೇರಿಯ ನಿರ್ದೇಶಕರಾದ ಡಾ. ಕರುಣಾಕರ ಕೋಟೆಗಾರ ಮಾತಾಡುತ್ತಾ, ಪ್ರತಿಷ್ಠಿತ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಜಗತ್ತಿನ 50ಕ್ಕೂ ಮಿಕ್ಕಿ ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ವಿಶೇಷ ದಿನವನ್ನು ರೋಟರಿಯೊಡನೆ ಆಚರಿಸುವದಕ್ಕೆ ಸಂತೋಷವಾಗುತ್ತದೆ ಎಂದರು.

ವಲಯ ಗವರ್ನರ್ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ವಲಯ ತರಬೇತುಗಾರ ಡಾ.ಸುರೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಕಾರ್ಯದರ್ಶಿ ಜನಾರ್ದನ ಭಟ್ ವಂದಿಸಿದರು. ವಲಯ ಸೇನಾನಿಗಳಾದ ಬಾಲಕೃಷ್ಣ ಕುಮಾರ್, ದಯಾನಂದ ನಾಯಕ್, ಗೀತಾಶ್ರೀ ಉಪಾಧ್ಯಾಯ,ರಾಜೇಶ್ ಡಿ.ಪಾಲನ್ ಮತ್ತು ವಿವಿದ ಕ್ಲಬ್ ಗಳ ಅಧ್ಯಕ್ಷರುಗಳಾದ ನಳೀನಿ ಶೆಟ್ಟಿ, ಪ್ರಭಾಕರ ಶೆಟ್ಟಿ, ನಿತ್ಯಾನಂದ ನಾಯಕ್, ರೇಣುಜಯರಾಂ, ಸಬಿತಾ ಭಟ್, ಜಗನ್ನಾಥ ಕೋಟೆ, ಪ್ರಸಾದ ಶೆಟ್ಟಿ, ಸೀತಾರಾಮ ತಂತ್ರಿ ಮತ್ತು ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

ಹೇಮಂತ ಯು.ಕಾಂತ ಕಾರ್ಯಕ್ರಮ ನಿರೂಪಿಸಿದರು. ವಸುದೈವಕುಟುಂಬಕಂ ಎಂಬ ವಿಷಯದ ಬಗ್ಗೆ ನಡೆದ ಗುಂಪು ಚರ್ಚೆಯಲ್ಲಿ ಸಮನ್ವಯಕಾರರಾಗಿ ಮಾಹೆಯ ಡಾ. ಪ್ರವೀಣ್ ಶೆಟ್ಟಿ ನಡೆಸಿ ಕೊಟ್ಟು ಜಪಾನಿನ ಕಝುವುಕಿ ಫರುಕ್ಕಿ, ಕೆನಡಾದ ಕಾರ್ಲ್ ಸ್ಟೀಫನ್ಸ್, ಫ್ರಾನ್ಸ್ ನ ವಿನ್ಸೆಂಟ್ ಮಾರಿ ಮತ್ತು ಇಂಗ್ಲೆಂಡ್ ನ ಎಮ್ಮಾ ಎಲಿಜಬೆತ್ ವರ್ಗೀಸ್ ಅವರು ತಮ್ಮ ವಿಷಯ ಮಂಡನೆ ಮಾಡಿದರು. ಮಾಹೆಯ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗನ್ನು ಪ್ರದರ್ಶಿಸಿದರು. ರೋಟರಿ ಸದಸ್ಯರು ಭಾರತೀಯ ವೇಷಭೂಷಣಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!