ಕಾರ್ಕಳ, ಫೆ. 18: ದಿನಾಂಕ 04-02-2023 ರಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಫೆಲಿಕ್ಸ್ ಡಯಾಸ್ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ಕಾರ್ಕಳದ ವ್ಯಕ್ತಿಯೊಬ್ಬರಿಗೆ ಪರಿಚಯವಾಗಿ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿದ್ದಾಗಿ ನಂಬಿಸಿ, ವ್ಯಾಲೆಂಟೈನ್ಸ್ ಡೇ ಗೆ ಗಿಫ್ಟ್ ಐಟಂಗಳ ಪಾರ್ಸೆಲ್ ನ್ನು ಕಳುಹಿಸುವುದಾಗಿ ತಿಳಿಸಿ ಅದರ ಫೊಟೋ ವನ್ನು ಹಾಗೂ ಮೆಸೇಜ್ ಗಳನ್ನು ವಾಟ್ಸ್ ಅಫ್ ನಂಬ್ರ ದ ಮುಖೇನ ಕಳುಹಿಸಿದ್ದು, ಇದನ್ನು ನಂಬಿದ ವ್ಯಕ್ತಿ ನಂತರ ದಿನಾಂಕ 13-02-2023 ರಂದು ದೆಹಲಿ ಏರ್ ಫೋರ್ಟ್ ಸಿಬ್ಬಂದಿ ಎಂದು ಮೊಬೈಲ್ ಕರೆ ಮಾಡಿ ಪಾರ್ಸಲ್ ನ ಗ್ರೌಂಡ್ ಪಾಸ್ ಮಾಡಲು ರೂ.47,000/- ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿದ್ದು, ಅದರಂತೆ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ತನ್ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಿಂದ ಹಣ ಡಿಪಾಸಿಟ್ ಮಾಡಿದ್ದು, ನಂತರ ಬೇರೆ ಬೇರೆ ರೀತಿಯಾಗಿ ಹೇಳಿ ಹಣವನ್ನು ಡಿಪಾಸಿಟ್ ಮಾಡುವಂತೆ ಹೇಳಿದ್ದು, ಅದರಂತೆ ಕ್ರಮಮಾಗಿ ತನ್ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಿಂದ ದಿನಾಂಕ 14-02-2023 ರಂದು ರೂ. 1,00,000/-, 79,500/-, ಹಾಗೂ ತನ್ನ ಎಸ್.ಬಿ ಐ ಬ್ಯಾಂಕ್ ನಿಂದ ದಿನಾಂಕ: 15-02-2023 ರಂದು ರೂ.3,00,000/-, 1,00,000/-, 1,37,000/- ಒಟ್ಟು ರೂ. 7,63,500/- ಹಣವನ್ನು ಮೋಸದಿಂದ ಡಿಪಾಸಿಟ್ ಮಾಡಿಸಿಕೊಂಡು ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಲೆಂಟೈನ್ಸ್ ಡೇ ಗಿಫ್ಟ್: ಕಾರ್ಕಳದ ವ್ಯಕ್ತಿಗೆ ಪಂಗನಾಮ
ವ್ಯಾಲೆಂಟೈನ್ಸ್ ಡೇ ಗಿಫ್ಟ್: ಕಾರ್ಕಳದ ವ್ಯಕ್ತಿಗೆ ಪಂಗನಾಮ
Date: