ಕಾರ್ಕಳ, ಫೆ. 14: ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ತರಬೇತಿ ಶಿಬಿರಗಳು ಅನಿವಾರ್ಯ ಎಂದು ವಿಜಯ ಶೆಟ್ಟಿ ಕೆಳಗಿನಮನೆ ಸಾಣೂರು ಅಭಿಪ್ರಾಯಪಟ್ಟರು. ಅವರು ನೆಹರು ಯುವ ಕೇಂದ್ರ ಸಂಘಟನೆ ಇವರ ಮಾರ್ಗದರ್ಶನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು ಇಲ್ಲಿನ ಹೈಸ್ಕೂಲ್ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪರೀಕ್ಷಾ ಪೂರ್ವ ಸಿದ್ಧತೆ ಮಾಹಿತಿ ಕಾರ್ಯಾಗಾರ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವಕ ಮಂಡಲ (ರಿ.) ಸಾಣೂರು ಪ್ರತಿವರ್ಷ ಆಯೋಜಿಸುವ ಪ್ರೇರಣಾ ಶಿಬಿರದಿಂದ ಆತ್ಮಸ್ಟೈರ್ಯ ಬೆಳೆದು ಉತ್ತಮ ಅಂಕ ಗಳಿಸಲು ಸಹಕಾರಿ ಎಂದರು.
ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ ಗಣೇಶ್ ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಶಿಬಿರದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ವಿಮಲಾ ವಂದಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜನಾರ್ಧನ್ ಆಚಾರ್ಯ, ಯುವಕ ಮಂಡಲದ ಕೋಶಾಧಿಕಾರಿ ರಾಜೇಶ್, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಸಮಿತಿ ಸದಸ್ಯರಾದ ಶುಭಕರ್ ಶೆಟ್ಟಿ, ಸೀತಾರಾಮ್, ವಿದ್ಯಾರ್ಥಿಗಳ ಪೋಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು. ಸರಕಾರಿ ಪದವಿಪೂರ್ವ ಕಾಲೇಜು ವೇಣೂರು ಇಲ್ಲಿನ ಕನ್ನಡ ಅಧ್ಯಾಪಕರಾದ ರವೀಂದ್ರ ಕೆ ಶಿಬಿರ ನಡೆಸಿ ಮಾರ್ಗದರ್ಶನ ನೀಡಿದರು.