Friday, September 20, 2024
Friday, September 20, 2024

ಹಾವಂಜೆ ಗ್ರಾಮ ವಿಕಾಸ ಸಮಿತಿ- ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ ಕಾರ್ಯಕ್ರಮ

ಹಾವಂಜೆ ಗ್ರಾಮ ವಿಕಾಸ ಸಮಿತಿ- ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ ಕಾರ್ಯಕ್ರಮ

Date:

ಹಾವಂಜೆ, ಫೆ. 12: ಹಾವಂಜೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ’ ಕಾರ್ಯಕ್ರಮ ಭಾನುವಾರ ಹಾವಂಜೆಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಉಪನ್ಯಾಸಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಗಣೇಶ್ ಪ್ರಸಾದ್ ಜಿ. ನಾಯಕ್ ಉದ್ಘಾಟನೆ ನೆರವೇರಿಸಿ ಸಂಪನ್ಮೂಲ ಉಪನ್ಯಾಸ ನೀಡಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ವೇಳಾಪಟ್ಟಿ ಹಾಕಿ ಅಧ್ಯಯನ ನಡೆಸಿದರೆ ಪರಿಣಾಮಕಾರಿ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೇವಲ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟಿನ ಬದಲಾವಣೆ ಅಸಾಧ್ಯ, ಬುದ್ಧಿವಂತಿಕೆ ಅಭಿವೃದ್ಧಿಪಡಿಸುವ ಜತೆಗೆ ಕಠಿಣ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದರೆ ಯಶಸ್ಸಿನ್ನತ್ತ ಮುನ್ನುಗ್ಗಬಹುದು ಎಂದರು.

ಹಾವಂಜೆ ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸತ್ಯನಾರಾಯಣ ಆಚಾರ್ಯ ಗೋಳಿಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಗುರುರಾಜ್ ಕಾರ್ತಿಬೈಲು, ಪ್ರಮೋದ್ ಹಾವಂಜೆ, ಹಿಂ.ಜಾ.ವೇ ಹಾವಂಜೆ ಘಟಕ ಸಂಚಾಲಕ ಅಶೋಕ್ ಶೇಡಿಗುಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿ ವಿದ್ಯಾರ್ಥಿ ಪ್ರಮುಖರಾದ ಆದರ್ಶ್, ಅಶ್ವಿನಿ, ಸ್ವಚ್ಛತಾ ಸಮಿತಿ ಪ್ರಮುಖ್ ಅಜಿತ್ ಆಚಾರ್ಯ ಕಾರ್ತಿಬೈಲು, ಮಂಜುನಾಥ್, ಶ್ವೇತಾ ಉಪಸ್ಥಿತರಿದ್ದರು. ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಅಜಿತ್ ಗೋಳಿಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ADVERTISEMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!