ಉಡುಪಿ, ಫೆ. 10: ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ-ಪ್ರಾಣಹಾನಿ ಉಂಟಾಗಿದ್ದು, ಸಂಪರ್ಕ ಹಾಗೂ ಸಾರಿಗೆ ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವ ಹಿನ್ನೆಲೆ, ರಾಜ್ಯ ಸರಕಾರವು ಅಪಾಯಕ್ಕೆ ಸಿಲುಕಿರುವ ಟರ್ಕಿ ಮತ್ತು ಸಿರಿಯಾದಲ್ಲಿ ವಾಸವಿರುವ ರಾಜ್ಯದ ಸಾರ್ವಜನಿಕರ ನೆರವಿಗೆ 24*7 ರಾಜ್ಯ ಸಹಾಯವಾಣಿ ಸಂಖ್ಯೆ: 080-1070, 080-22340676 ಮತ್ತು ಇ-ಮೇಲ್ [email protected], [email protected] ನ್ನು ಆರಂಭಿಸಿದ್ದು, ಸಾರ್ವಜನಿಕರು ಅವಶ್ಯಕತೆಯಿದ್ದಲ್ಲಿ ಸದ್ರಿ ಸಹಾಯವಾಣಿಯ ಸೇವೆಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತುರ್ತು ವಿಪತ್ತು ನಿರ್ವಹಣಾ ಘಟಕ, ಉಡುಪಿ ಸಹಾಯವಾಣಿ ಸಂಖ್ಯೆ: 1077 /0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.