Monday, January 20, 2025
Monday, January 20, 2025

ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಆಸ್ವಾದಿಸಬೇಕು: ಡಾ. ಎಚ್.ಎಸ್.ಶಿವಪ್ರಕಾಶ್

ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಆಸ್ವಾದಿಸಬೇಕು: ಡಾ. ಎಚ್.ಎಸ್.ಶಿವಪ್ರಕಾಶ್

Date:

ಮಣಿಪಾಲ. ಫೆ. 3: ಜಟಿಲವಾದ ಸಿದ್ಧಾಂತಗಳ ಒಳಗೆ ಸಿಲುಕದೆ ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಅದನ್ನು ಆಸ್ವಾದಿಸಬೇಕು ಎಂದು ಖ್ಯಾತ ಸಾಹಿತಿ-ಕವಿ-ವಿಮರ್ಶಕ ಡಾ.ಎಚ್.ಎಸ್.ಶಿವಪ್ರಕಾಶ್ ಹೇಳಿದರು. ಮಣಿಪಾಲದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಸಹಯೋಗದಲ್ಲಿ ಅಮೃತ ಯುವ ಕಲೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಕಲಾವಿಮರ್ಶೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಲಾವಿಮರ್ಶೆ ಎಂಬುದು ಕಲಾ ಸಿದ್ಧಾಂತಗಳ ಮೇಲೆಯೇ ಕಟ್ಟಲ್ಪಡುತ್ತಿದ್ದು, ಇದು ಕಲಾವಿಮರ್ಶೆಯ ಮೂಲ ಸಾರವನ್ನೇ ಇಲ್ಲವಾಗಿಸಬಾರದು ಎಂದರು. ವಿಮರ್ಶೆ ಎಂಬುದೇ ಒಂದು ಆಧುನಿಕ ವಿದ್ಯಮಾನವಾಗಿದ್ದು, ಕಲಾವಿಮರ್ಶೆ ಭಾರೀ ಸಿದ್ಧಾಂತಗಳ ಭಾರದಲ್ಲಿ ಸೋಲಬಾರದು ಎಂದರು.

ಡಾ.ಪ್ರಭಾಕರ ಜೋಶಿ ಅವರು ಭಾರತೀಯ ಸೌಂದರ್ಯಶಾಸ್ತ್ರದ ಅಂಶಗಳನ್ನು ವಿವರಿಸಿದರು. ಖ್ಯಾತ ಕಲಾವಿದೆ ಮಧು ನಟರಾಜ್ ಮಾತನಾಡಿ ಕೆಲವು ನೂತನ ಪ್ರಯೋಗಗಳಿಂದ ಕಲೆಯನ್ನು ಯುವ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು. ಡಾ. ಆರ್ತಿ ಶೆಟ್ಟಿ ಅವರು ಭರತನಾಟ್ಯ ಮತ್ತು ಪತ್ರಿಕೋದ್ಯಮವನ್ನು ಒಟ್ಟಿಗೆ ತರಲು ಅವರು ಮಾಡಿದ ಪ್ರಯತ್ನವನ್ನು ವಿವರಿಸಿದರು. ಡಾ. ವಸಂತ ಭಾರಧ್ವಾಜ್ ಅವರು ಮಾತನಾಡಿ, ಯಾವುದೇ ಟೀಕೆಗೆ ಮುನ್ನ ಕಲಾಪ್ರಕಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಮಾಧ್ಯಮಗಳಲ್ಲಿ ಕಲಾ ವಿಮರ್ಶೆಯ ಸ್ಥಾನ ಮರೆಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರೊ. ವರದೇಶ್ ಹಿರೇಗಂಗೆ ಅವರು ಕಲೆ ಮತ್ತು ಕಲೆಯ ಅನುಭವವೇ ಕಲಾವಿಮರ್ಶೆಗೆ ಪ್ರಾಥಮಿಕ ಮತ್ತು ಮೂಲಭೂತವಾಗಿದೆ ಎಂದು ವಾದಿಸಿದರು. ಅಕಾಡೆಮಿಯ ಉಪ ಕಾರ್ಯದರ್ಶಿ ಹೆಲನ್ ಆಚಾರ್ಯ, ವಿದುಷಿ ಭ್ರಮರಿ ಶಿವಪ್ರಕಾಶ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!