Monday, November 25, 2024
Monday, November 25, 2024

ಅಜ್ಜರಕಾಡು- ಚೈಲ್ಡ್ ಲೈನ್-1098 ಉಡುಪಿ ತೆರೆದ ಮನೆ ಕಾರ್ಯಕ್ರಮ

ಅಜ್ಜರಕಾಡು- ಚೈಲ್ಡ್ ಲೈನ್-1098 ಉಡುಪಿ ತೆರೆದ ಮನೆ ಕಾರ್ಯಕ್ರಮ

Date:

ಉಡುಪಿ, ಫೆ.2: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ ಲೈನ್-1098 ಉಡುಪಿಯ ವತಿಯಿಂದ ತೆರೆದ ಮನೆ ಕಾರ್ಯಕ್ರಮವು ಅಜ್ಜರಕಾಡಿನ ವಿವೇಕಾನಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಉಡುಪಿ ನಗರಸಭಾ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕ್ರೀಡೋಪಕರಣವನ್ನು ವಿತರಿಸುವ ಮೂಲಕ ಪರಿಹಾರವನ್ನು ನೀಡಿರುತ್ತಾರೆ ಹಾಗೂ ನಗರಸಭೆಯಿಂದಾಗುವ ಸಹಾಯವನ್ನು ಮಾಡಿಕೊಡುವ ಭರವಸೆಯನ್ನು ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಪೊಲೀಸ್ ಠಾಣೆಯ ಎ.ಎಸ್.ಐ ಸದಾಶಿವ, ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಸಂದರ್ಭದಲ್ಲಿ ಅಡ್ಡ ದಾರಿಯನ್ನು ತುಳಿಯಬಾರದು. ಅವಶ್ಯಕತೆಗಿಂತ ಹೆಚ್ಚು ಮೊಬೈಲ್ ಬಳಸಬಾರದು ಎಂದ ಅವರು, ಪೋಕ್ಸೋ ಕಾಯಿದೆಯ ಕುರಿತು ಅರಿವನ್ನು ಮೂಡಿಸಿದರು. ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಮಕ್ಕಳು ಪೊಲೀಸ್ ಅಥವಾ ಚೈಲ್ಡ್ ಲೈನ್-1098ಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು. ಮಕ್ಕಳ ಕಳ್ಳ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ, ಮಕ್ಕಳ ವೇಶ್ಯವಾಟಿಕೆ ಮತ್ತು ಮಕ್ಕಳ ಸ್ನೇಹಿ ಪೋಲಿಸ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡಿದರು.

Advertisement/ಜಾಹೀರಾತು

ಅಂಗನವಾಡಿ ಮೇಲ್ವಿಚಾರಕರಾದ ಶೈಲಾ ಇವರು ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕಿ ಅಂಬಿಕಾ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಹಾಗೂ ಮಕ್ಕಳ ರಕ್ಷಣೆಯ ಕುರಿತು ಮಾಹಿತಿಯನ್ನು ನೀಡಿದರು. ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಅಮೃತಾ ಬಾಲಕಾರ್ಮಿಕತೆಯ ಕುರಿತು ಮಾತನಾಡಿದರು.

ಮೆಸ್ಕಾಂ ಇಲಾಖೆಯಿಂದ ಸಹಾಯಕ ಇಂಜಿನಿಯರಾದ ರಾಜೇಶ್ ಮೆಸ್ಕಾಂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ನಂತರ ಬಿ.ಆರ್.ಸಿಯ ಸಂಯೋಜಕರಾದ ಉಮಾ ಇವರು ಮಕ್ಕಳನುದ್ದೇಶಿಸಿ ಮಾತನಾಡಿದರು. ಮಹಿಳಾ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಜ್ಯೋತಿ ಕೆ., ಶಿಕ್ಷಣ ಸಂಯೋಜಕರಾದ ಪವನ್ ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುರೇಶ್, ಸಹ ನಿರ್ದೇಶಕರು ಚೈಲ್ಡ್ ಲೈನ್-1098 ಉಡುಪಿ ಸಹ ನಿರ್ದೇಶಕ ಗುರುರಾಜ್ ಭಟ್, ಚೈಲ್ಡ್ ಲೈನ್-1098 ಕೇಂದ್ರ ಸಂಯೋಜಕರಾದ ಜ್ಯೋತಿ, ಚೈಲ್ಡ್ ಲೈನ್-1098 ಉಡುಪಿ ಆಪ್ತ ಸಮಾಲೋಚಕರು, ಸದಸ್ಯರು, ಸ್ಥಳೀಯರು, ಮಕ್ಕಳು, ಪೋಷಕರು, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ಮೋಹಿನಿ ಕಾರ್ಯಕ್ರಮವನ್ನು ನಿರೂಪಿಸಿ, ರೇಷ್ಮಾ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!