ಉಡುಪಿ, ಜ. 25: ಚುನಾವಣಾ ವಿಧಾನವೇ ಪ್ರಜಾಪ್ರಭುತ್ವದ ಸೇೂಲು ಗೆಲುವಿನ ಅಳತೆಗೇೂಲು ಎಂದು ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಉಡುಪಿಯ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಮತದಾರರ ಅರಿವು ಮಾಹಿತಿ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಮಾಹಿತಿ ಕಾರ್ಯಗಾರದಲ್ಲಿ ವಿಷಯ ತಜ್ಞರಾಗಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಯಶಸ್ಸು ಮತದಾರರ ಅರ್ಹತೆಯ ಆಧಾರದಲ್ಲಿ ನಿರ್ಧಾರವಾಗುತ್ತದೆ. ಯುವ ಮತದಾರರು ರಾಷ್ಟ್ರದ ಹಿತದೃಷ್ಟಿಯಿಂದ ಮತ ಚಲಾಯಿಸಬೇಕೇ ಹೊರತು ಜಾತಿ ಮತ ಧರ್ಮಗಳ ಸಂಕುಚಿತ ಭಾವನೆಗಳಿಗೆ ಬಲಿ ಬೀಳಬಾರದು. ಸಂಸತ್ತು ಭವನದ ಸೌಂದರ್ಯ ವೃದ್ಧಿಸುವುದು ಅದರ ಒಳಗೆ ಕೂತು ನಮ್ಮೆಲ್ಲರ ಆಶೇೂತ್ತರಗಳನ್ನು ಹೇಗೆ ಪ್ರತಿನಿಧಿಸುತ್ತಾರೆ ಅನ್ನುವುದರ ಮೇಲೆ ಹೊರತು ಬರೇ ಇಟ್ಟಿಗೆ ಕಟ್ಟಿಗೆಗಳಿಂದ ರೂಪಿಸಿದ ಭವ್ಯ ಸೌಧಗಳಿಂದ ಅಲ್ಲ. ಮತದಾನದ ಒಳಗೆ ಪ್ರತಿಯೊಬ್ಬರ ಬದುಕಿನ ಹಕ್ಕು ಅಡಗಿದೆ ಅನ್ನುವುದನ್ನು ನಾವು ಮರೆಯಬಾರದು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ವಹಿಸಿ ವಿದ್ಯಾರ್ಥಿಗಳಿಗೆ ಮತದಾನದ ಪಾವಿತ್ರ್ಯತೆ ಮತ್ತು ಹಕ್ಕು ಕರ್ತವ್ಯದ ಕುರಿತಾಗಿ ಪ್ರತಿಜ್ಞಾ ವಿಧಿ ಬೇೂಧಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.