Tuesday, January 21, 2025
Tuesday, January 21, 2025

ಶ್ರೀ ಕಾಳಿಕಾಂಬಾ ಭಜನಾ ಸಂಘ- ಜಿಲ್ಲಾ ಮಟ್ಟದ ಸ್ಪರ್ಧೆ ಸಂಪನ್ನ

ಶ್ರೀ ಕಾಳಿಕಾಂಬಾ ಭಜನಾ ಸಂಘ- ಜಿಲ್ಲಾ ಮಟ್ಟದ ಸ್ಪರ್ಧೆ ಸಂಪನ್ನ

Date:

ತೆಂಕನಿಡಿಯೂರು: ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಮಕರ ಸಂಕ್ರಾಂತಿ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ದೇವಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಅಪ್ಪಿ ಶಿವಯ್ಯ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ರಂಗಕಲಾವಿದರಾದ ಯೋಗೀಶ್ ಕೊಳಲಗಿರಿ ಮುಖ್ಯ ಅತಿಥಿಯಾಗಿ ಭಾಗಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮಲ್ಪೆ ಪೋಲೀಸ್ ಠಾಣೆಯ ಪಿ.ಎಸ್.ಐ ಸುಷ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧಾರ್ಮಿಕ
ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ನೀಡುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹವಾಗಿದೆ. ವಿದ್ಯಾರ್ಥಿಗಳೆಲ್ಲರೂ ಇಂತಹ ಅವಕಾಶಗನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಟಿ.ಕೃಷ್ಣ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ವಾದಿರಾಜ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಧವ ಕೆ. ಆಚಾರ್ಯ ಸ್ವಾಗತಿಸಿ, ಸುಚಿತ್ರಾ ಟಿ ವಂದಿಸಿದರು. ಉದಯ ಜೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಪ್ರದೀಪ್ ಆಚಾರ್ಯ ಸ್ವಾಗತಿಸಿ, ಉಮೇಶ್ ಜೆ ಆಚಾರ್ಯ ವಂದಿಸಿದರು. ರೋಹಿತ್ ಆಚಾರ್ಯ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿ, ಪ್ರಫುಲ್ಲ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ: ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಭಕ್ತಿಗೀತೆ ಸ್ಪರ್ಧೆ (ತಲಪಾಡಿ ಸರಳಾದೇವಿ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ಶಿವಾನಿ, ಆದಿವುಡುಪಿ ಹಿ.ಪ್ರಾ ಶಾಲೆ, ಆದಿವುಡುಪಿ, ದ್ವಿತೀಯ: ವಿನಯ್, ಸರಕಾರಿ ಹಿ.ಪ್ರಾ ಶಾಲೆ, ಗರಡಿಮಜಲು, ತೃತೀಯ: ದಿಯಾ ಎಸ್ ಸುವರ್ಣ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ (ಹೊಯಿಗೆತೋಟ ಲಕ್ಷ್ಮಣ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ಧೃತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, ದ್ವಿತೀಯ: ಅದಿತಿ, ವಾಸುದೇವ ಕೃಪಾ ವಿದ್ಯಾ ಮಂದಿರ, ಉಡುಪಿ, ತೃತೀಯ : ವಿಭನ್ ಕುಂದರ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ, ಸಮಾಧಾನಕರ: ತ್ರಿಶಾಲ್, ಎಲ್.ವಿ.ಪಿ. ಅನುದಾನಿತ ಹಿ.ಪ್ರಾ ಶಾಲೆ ಪುತ್ತೂರು, ಸಮಾಧಾನಕರ: ದ್ರಿಶಿತ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಬೈಕಾಡಿ ಶಿವಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ), ಪ್ರಥಮ : ರಾಜ್‌ರಚನ್, ಉಜ್ವಲ್ ಸುವರ್ಣ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ, ದ್ವಿತೀಯ: ಆದಿತ್ಯ ಟಿ.ಎಸ್, ಚಿರಾಗ್ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ, ತೃತೀಯ: ದಿಯಾಎಸ್ ಸುವರ್ಣ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ, ಶಗುನ್ ಎಸ್ ಶೆಟ್ಟಿ ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾವಗಾನ ಸ್ಪರ್ಧೆ (ಕುಂಜಿಬೆಟ್ಟು ಜಲಜ ಸೋಮಯ್ಯಾಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ಚಿಂತನ, ಡಾ.ಟಿ.ಎಂ.ಎ ಪೈ ಪ್ರೌಢಶಾಲೆ ಕಲ್ಯಾಣಪುರ, ದ್ವಿತೀಯ: ವಿಶ್ವಜಿತ್, ಪ್ರೌಢಶಾಲಾ ವಿಭಾಗ, ಸರಕಾರಿ ಪ.ಪೂ. ಕಾಲೇಜು ತೆಂಕನಿಡಿಯೂರು, ತೃತೀಯ : ಶಗುನ್ ಎಸ್ ಶೆಟ್ಟಿ ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ.

ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಕೆ. ಬಂಟುಞ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ಪೃಥ್ವಿ ಎಚ್.ಪಿ, ಆಶ್ಲಿ ಥಾಮಸ್, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ದ್ವಿತೀಯ: ಯಲ್ಲಪ್ಪ, ಇಸ್ಮಾಯಿಲ್ ಇಟಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ತೃತೀಯ: ರಕ್ಷಿತ್, ಸುಮಂತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ

ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ಟಿ.ಕೃಷ್ಣಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ತೇಜಸ್ವಿನಿ, ಸರಕಾರಿ ಪ.ಪೂ. ಕಾಲೇಜು ತೆಂಕನಿಡಿಯೂರು, ದ್ವಿತೀಯ: ಸುಷ್ಮಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ತೃತೀಯ: ರಾಜೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!