ಉಡುಪಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಆಳವಡಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಹೇಳಿದರು. ಯುವ ರೆಡ್ ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕದಿಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಅವರು, ನಮ್ಮ ದೇಶವು ಮುಂದಿನ 20 ವರ್ಷಗಳಲ್ಲಿ ಅತ್ಯಧಿಕ ಯುವಶಕ್ತಿಯನ್ನು ಹೊಂದಿರುವ ಬಲಿಷ್ಠ ದೇಶವಾಗುತ್ತದೆ. ಆದರಿಂದ ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾದಿಕಾರಿ ಡಾ. ರಂಗಸ್ವಾಮಿ ಜೆ., ಉಪ ಕಾರ್ಯಕ್ರಮ ಅಧಿಕಾರಿ ಅನುಷಾ ಮತ್ತು ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಸಂದೀಪ್ ಮತ್ತು ಸುಪರ್ಣಾ ಉಪಸ್ಥಿತರಿದ್ದರು. ಯೂಥ್ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರಾದ ಶ್ರೀದೇವಿ ಸ್ವಾಗತಿಸಿ, ಆನಂದಿ ವಂದಿಸಿದರು. ಶ್ರಾವ್ಯ ನಿರೂಪಿಸಿದರು.