ಮಲ್ಪೆ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಮವನ್ನು ಉದ್ಘಾಟಿಸಿದ ಮಣಿಪಾಲ ಗ್ರೂಪ್ ಇದರ ಚೇರ್ಮೆನ್ ಟಿ. ಸುಧಾಕರ ಪೈ ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಜ್ಞಾನದ ಜೊತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾದ ದಯಾನಂದ ಶೆಟ್ಟಿ ಕೊಜಕುಳಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕಳೆದ 29 ವರ್ಷಗಳಿಂದ ಕಾಲೇಜು ಬೆಳೆದು ಬಂದ ಪರಂಪರೆಯನ್ನು ವಿವರಿಸುತ್ತಾ, ಈ ಪ್ರದೇಶದಲ್ಲಿ ಸಾಕ್ಷರ ಹಾಗೂ ಶೈಕ್ಷಣಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಕಾಲೇಜು ವಹಿಸಿದ ಪಾತ್ರವನ್ನು ವಿವರಿಸಿದರು. ಕಳೆದ 29 ವರ್ಷಗಳಿಂದ 36 ರ್ಯಾಂಕುಗಳಿಗೆ ಸಾಕ್ಷಿಯಾದ ಈ ಕಾಲೇಜು ಈ ಪ್ರದೇಶದಲ್ಲಿ ಒಂದು ಗಮನಾರ್ಹ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಧಾಕೃಷ್ಣ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷರಾದ ಸ್ಪಂದನಾ ಮಯ್ಯ ವಂದಿಸಿದರು. ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಡಾ. ರಾಘವ ನಾಯ್ಕ, ಪದವಿ ವಿಭಾಗದ ಸಾಂಸ್ಕೃತಿಕ ಸಂಚಾಲಕರಾದ ಕೃಷ್ಣ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಪ್ರತಿನಿಧಿಗಳಾದ ಯಮುನಪ್ಪ, ಸೋಮನಾಥ, ರಕ್ಷಿತಾ, ದಿಶಾ ಜಿ.ಸಿ., ಅನ್ವಿತಾ ಜಿ.ವಿ., ಮಹೇಶ್, ಸುಹಾಸ್, ಅಕ್ಷಯ್, ಸೌಂದರ್ಯ, ಕೆ. ಪ್ರಣೀತ್, ಸುಷ್ಮಾ ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ಕಾರ್ಯಕ್ರಮ ನಿರೂಪಿಸಿದರು.