Tuesday, January 21, 2025
Tuesday, January 21, 2025

ಜ. 6- ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದಿಂದ ದೂರು ಸ್ವೀಕಾರ

ಜ. 6- ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದಿಂದ ದೂರು ಸ್ವೀಕಾರ

Date:

ಉಡುಪಿ: ಮಕ್ಕಳ ರಕ್ಷಣೆಗಾಗಿ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗವು ಸಿ.ಪಿ.ಸಿ.ಆರ್ ಕಾಯಿದೆ 2007 ರ ಅಡಿಯಲ್ಲಿ ರೂಪುಗೊಂಡ ಶಾಸನಬದ್ಧ ಸಂಸ್ಥೆಯಾಗಿದ್ದು, ಆಯೋಗವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮತ್ತು ವಿವಿಧ ಕಾಯಿದೆ ಹಾಗೂ ಕಾನೂನುಗಳ ಅಡಿಯಲ್ಲಿ ಒದಗಿಸಲಾದ ಹಕ್ಕುಗಳನ್ನು ಆನಂದಿಸಲು ಎಲ್ಲಾ ಮಕ್ಕಳಿಗೆ ಅವಕಾಶ ಮಾಡಿಕೊಡುತ್ತದೆ.

ಮಕ್ಕಳ ಕುಂದು ಕೊರತೆ ನಿವಾರಣಾ ಸಭೆಯನ್ನು ನಡೆಸಲು ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು ಜನವರಿ 6 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಬೀದಿ ಮಕ್ಕಳು, ಶಾಲಾ ಮಕ್ಕಳು, ಪೋಷಕರು, ಶಿಶು ಪಾಲನಾ ಸಂಸ್ಥೆಗಳು, ಮನೆಯ ಮಕ್ಕಳು, ವಸತಿ/ ತರಬೇತಿ ಪಡೆಯುವ ಸಂಸ್ಥೆಗಳು ಸೇರಿದಂತೆ ಎಲ್ಲಾ ವಿಭಾಗಗಳ ಮಕ್ಕಳು ಮತ್ತು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗಳು ಅಂದು ಬೆಳಗ್ಗೆ 9 ಕ್ಕೆ ನೋಂದಾಯಿಸಿಕೊಂಡು 10 ಗಂಟೆಗೆ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಆಯೋಗ ಮುಂದೆ ದೂರನ್ನು ಸಲ್ಲಿಸಬಹುದಾಗಿದೆ.

ಅಪಾಯಕಾರಿ ಉದ್ಯೋಗದಲ್ಲಿ, ಗೃಹ ಕಾರ್ಮಿಕರಂತೆ ಬಾಲ ಕಾರ್ಮಿಕರನ್ನು ತೊಡಗಿಸಿಕೊಳ್ಳುವುದು, ರಕ್ಷಿಸಲ್ಪಟ್ಟ ಬಾಲಕಾರ್ಮಿಕರನ್ನು ಸ್ವದೇಶಕ್ಕೆ ಕಳುಹಿಸುವುದು, ಬಾಕಿ/ ಪರಿಹಾರವನ್ನು ಪಾವತಿಸದಿರುವುದು, ರಸ್ತೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಗು, ಆಸಿಡ್ ದಾಳಿ ಸಂಬಂಧಿಸಿದ ವಿಷಯಗಳು, ಬಲವಂತದ ಭಿಕ್ಷೆ, ಪೋಷಕರು/ ಯಾವುದೇ ವ್ಯಕ್ತಿಯೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುವುದು, ಕೌಟುಂಬಿಕ ಹಿಂಸೆಗೆ ಬಲಿಯಾದ ಮಗು, ಹೆಚ್.ಐ.ವಿ ಸ್ಥಿತಿ ಆಧಾರದ ಮೇಲೆ ಮಗುವಿನ ತಾರತಮ್ಯ, ದೈಹಿಕ ನಿಂದನೆ, ಆಕ್ರಮಣ, ಪರಿತ್ಯಕ್ತ, ನಿರ್ಲಕ್ಷಿಸಿದ ಮಗು, ಪೊಲೀಸರಿಂದ ಬೆಳೆಸಿದ ಮಗು, ಅಕ್ರಮ ದತ್ತು, ಸಿ.ಸಿ.ಐ ನಲ್ಲಿ ಮಗುವಿನ ದುರ್ಬಳಕೆ/ ಅಸಭ್ಯ ವರ್ತನೆ, ಸಿ.ಸಿ.ಐ ಮೂಲಕ ಮಗುವಿನ ಮಾರಾಟ, ಮಕ್ಕಳ ಮೇಲಿನ ದೌರ್ಜನ್ಯ, ಮಗುವಿನ ಮಾರಾಟ, ನಿರ್ಲಕ್ಷ್ಯದಿಂದ ಸಾವಿಗೊಳಗಾದ ಮಗು, ಅಪಹರಣ, ಕಾಣೆಯಾದ ಮಗು, ಆತ್ಮಹತ್ಯೆ, ಸಾಮಾಜಿಕ/ ಮಾಧ್ಯಮ ಮೂಲಕ ಮಕ್ಕಳ ಹಕ್ಕುಗಳ ಉಲ್ಲಂಘನೆ, ನೆರೆಹೊರೆಯಲ್ಲಿ ಶಾಲೆಯಿಲ್ಲದಿರುವುದು, ಮೂಲಭೂತ ಸೌಕರ್ಯಗಳ ಕೊರತೆ, ಶಾಲೆಯಲ್ಲಿ ದೈಹಿಕ ಹಿಂಸೆ, ಶಾಲಾ ಪ್ರವೇಶ ನಿರಾಕರಣೆ, ಅಂಗವೈಕಲ್ಯ ಸಂಬಂಧಿತ ದೂರು, ಪಠ್ಯಪುಸ್ತಕಗಳಿಗೆ ಸಂಬAಧಿಸಿದ ದೂರು, ಶೈಕ್ಷಣಿಕ ಪ್ರಾಧಿಕಾರದಿಂದ ಪಠ್ಯಕ್ರಮ/ ಮೌಲ್ಯಮಾಪನ ಕಾರ್ಯವಿಧಾನವನ್ನು ರೂಪಿಸಲಾಗದೇ ಇರುವ ಕುರಿತು, ಶಾಲಾ ಆವರಣದ ದುರ್ಬಳಕೆ, ಶಾಲೆಯ ಕಟ್ಟಡವನ್ನು ಮುಚ್ಚುವ/ ಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು, ಲೈಂಗಿಕ ದೌರ್ಜನ್ಯ, ಪರಿಹಾರ, ವೈದ್ಯಕೀಯ ನಿರ್ಲಕ್ಷ್ಯತೆ, ರೋಗ ಹಾಗೂ ಚಿಕಿತ್ಸೆಯಲ್ಲಿ ವಿಳಂಬ, ನಿಷ್ಕ್ರಿಯತೆಗೆ ಸಂಬಂಧಿಸಿದ ದೂರುಗಳು, ಅಪೌಷ್ಠಿಕತೆ, ಮಧ್ಯಾಹ್ನದ ಊಟ, ಮಾದಕ ವಸ್ತುಗಳ ದುರ್ಬಳಕೆ ಹಾಗೂ ಬಾಲ್ಯದ ಬೆಳವಣಿಗೆಯ ಅಸ್ವಸ್ಥೆಗಳಿಗೆ ಪುನರ್ವಸತಿ ಒದಗಿಸುವ ಕುರಿತ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!