Thursday, January 23, 2025
Thursday, January 23, 2025

ಬ್ರಹ್ಮಾವರ ರುಡೆ ಸೆಟ್- ಉಚಿತ ಟಿವಿ ರಿಪೇರಿ ತರಬೇತಿ

ಬ್ರಹ್ಮಾವರ ರುಡೆ ಸೆಟ್- ಉಚಿತ ಟಿವಿ ರಿಪೇರಿ ತರಬೇತಿ

Date:

ಬ್ರಹ್ಮಾವರ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಟಿ.ವಿ ರಿಪೇರಿ ತರಬೇತಿ ದಿನಾಂಕ 02.01.2023 ರಿಂದ 31.01.2023ರ ವರೆಗೆ 30ದಿನಗಳ ನಡೆಯಲಿದೆ.

ಈ ತರಬೇತಿಗೆ ಹೆಚ್ಚು ಬೇಡಿಕೆ ಇದ್ದು ಹಾಗೂ ಇಂದಿನ ಆಧುನಿಕ ರೀತಿಯ ಎಲ್.ಸಿ.ಡಿ, ಎಲ್.ಇ.ಡಿ., ಆಂಡ್ರಾಯ್ಡ್ ಮುಂತಾದ ಆನೇಕ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿಸಲಾಗುವುದು. ತರಬೇತಿಯಲ್ಲಿ ಟಿ.ವಿ ರಿಪೇರಿ ಮಾಡಿ ಅದರ ವ್ಯವಹಾರ ನಡೆಸಲು‌ ಬೇಕಾದ ಮಾರುಕಟ್ಟೆ ನಡೆಸುವ ಬಗ್ಗೆ, ಬ್ಯಾಂಕಿನ ವ್ಯವಹಾರ, ಸರಕಾರಿ ಯೋಜನೆಗಳ ಬಗ್ಗೆ, ಯೋಜನಾ ವರದಿ ತಯಾರಿಸುವ ಬಗ್ಗೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ಬಗ್ಗೆ, ಅವಲಂಬನೆ ಇಲ್ಲದೆ ವ್ಯವಹಾರಿಸುವ ಬಗ್ಗೆ, ರಿಸ್ಕ್ ತೆಗೆದುಕೊಳ್ಳವ ರೀತಿಗಳ ಬಗ್ಗೆ, ಗುಣಮಟ್ಟದ ನಿರ್ವಹಣೆ ಬಗ್ಗೆ ಮುಂತಾದ ವಿಷಯಗಳ ಬಗ್ಗೆ ವಿಶೇಷವಾದ ತರಬೇತಿ ನೀಡಲಾಗುವುದು.

ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ ಮುಂದೇ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು, ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ ಕೊಡಬಹುದು.

ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-576213 ಉಡುಪಿ ಜಿಲ್ಲೆ ವಾಟ್ಸಪ್ ನಂ. 9632561145, 9448348569,9844086383,9611544930,9591233748, 8861325564. ವೆಬ್ ಸೈಟ್ ನ ಮೂಲಕ ಸಹ ಅರ್ಜಿ ಸಲ್ಲಿಸಬಹುದು. http://WWW.rudsetitraining.org ಇಮೇಲ್ ವಿಳಾಸ: [email protected]

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!