Monday, November 25, 2024
Monday, November 25, 2024

ತೆಂಕನಿಡಿಯೂರು- ಮೂರು ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಆಗಿ ಭಡ್ತಿ

ತೆಂಕನಿಡಿಯೂರು- ಮೂರು ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಆಗಿ ಭಡ್ತಿ

Date:

ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಮೂರು ಸಹ ಪ್ರಾಧ್ಯಾಪಕರಿಗೆ ಕಾಲೇಜು ಶಿಕ್ಷಣ ಇಲಾಖೆ ಅವರ ಶೈಕ್ಷಣಿಕ ಸಾಧನೆಗಾಗಿ ಯುಜಿಸಿ ನಿಯಾಮಾವಳಿ ಪ್ರಕಾರ ಪ್ರೊಫೆಸರ್ ಆಗಿ ಭಡ್ತಿ ನೀಡಿದೆ.

ಕಾಲೇಜಿನ ಪ್ರಾಂಶುಪಾಲರು ಮತ್ತು ಇತಿಹಾಸ ಸಹಪ್ರಾಧ್ಯಾಪಕರಾದ ಡಾ.ಸುರೇಶ್ ರೈ ಕೆ., ಕನ್ನಡ ಸಹಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್ ಶೆಟ್ಟಿ ಹಾಗೂ ಅರ್ಥಶಾಸ್ತ್ರ ಸಹಪ್ರಾಧ್ಯಾಪಕರಾದ ಡಾ. ಗೋಪಾಲಕೃಷ್ಣ ಗಾಂವ್ಕರ್ ಈ ಭಡ್ತಿಯ ಮನ್ನಣೆಗೆ ಪಾತ್ರವಾದವರು.

ಪ್ರಾಂಶುಪಾಲರಾದ ಡಾ. ಸುರೇಶ್ ರೈಯವರು 29 ವರ್ಷಗಳ ಸೇವಾನುಭವ ಹೊಂದಿದ್ದು 25 ರಾಷ್ಟ್ರೀಯ ಮತ್ತು 2 ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಲೇಖನ ಗಳನ್ನು ಪ್ರಕಟಿಸಿದ್ದು 28 ಐ.ಎಸ್.ಬಿ.ಎನ್. ಮಾನ್ಯತೆ ಪಡೆದ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಎರಡು ಗ್ರಂಥಗಳನ್ನು ಸಂಪಾದಿಸಿದ್ದಾರೆ.

ಅಲ್ಲದೆ ಮಣಿಪಾಲದ ಮಾಹೆಯ ಮಾನವಿಕ ವಿಭಾಗದಲ್ಲಿ ಗೌರವ ಸಂಶೋಧನಾ ಮಾರ್ಗದರ್ಶಕರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಆಂತರಿಕ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ. ಜಯಪ್ರಕಾಶ್ ಶೆಟ್ಟಿಯವರು 29 ವರ್ಷಗಳ ಸೇವಾನುಭವ ಹೊಂದಿದ್ದು 12 ಐ.ಎಸ್.ಬಿ.ಎನ್. ಮಾನ್ಯತೆ ಪಡೆದ ಪುಸ್ತಕ ಗಳನ್ನು ಮತ್ತು 80 ಲೇಖನಗಳನ್ನು ವಿವಿಧ ರಾಜ್ಯ ಮತ್ತು ರಾಷ್ಟ್ರಮಟ್ಟದ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ.

29 ವರ್ಷಗಳ ಸೇವಾನುಭವ ಹೊಂದಿರುವ ಡಾ. ಗೋಪಾಲಕೃಷ್ಣ ಗಾಂವ್ಕರ್ ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಭಾರತಿಯಾರ್ ವಿಶ್ವವಿದ್ಯಾಲಯ ಕೊಯಮತ್ತೂರು ಇಲ್ಲಿನ ಸಂಶೋಧನಾ ಮಾರ್ಗದರ್ಶಕರಾಗಿದ್ದು ಈವರೆಗೆ 5 ಪಿ.ಹೆಚ್ಡಿ ಮತ್ತು 18 ಕ್ಕಿಂತ ಹೆಚ್ಚು ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಅವರ 35ಕ್ಕಿಂತಲೂ ಹೆಚ್ಚು ಲೇಖನಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರು ಎರಡು ಗ್ರಂಥಗಳನ್ನು ಸಂಪಾದಿಸಿದ್ದು ಅಲ್ಲದೆ ಒಂದು ಪುಸ್ತಕವನ್ನು ರಚಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!