ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿರುವ ರವಿಚಂದ್ರ ಹೊಸೂರು ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಮಂಡಿಸಿದ, ‘ರೋಲ್ ಆಫ್ ಬ್ಯಾಂಕ್ಸ್ ಇನ್ ರೂರಲ್ ಡೆವಲಪ್‌ಮೆಂಟ್ – ಏ ಸ್ವಡಿ ಇನ್ ಉಡುಪಿ ಡಿಸ್ಟ್ರಿಕ್ಟ್’ ಎನ್ನುವ ಸಂಶೋಧನಾ ಮಹಾಪ್ರಬಂಧಕ್ಕೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪದವಿ ನೀಡಿದೆ.
ಇವರು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ರೇಣುಕಾ ಕೆ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರು ವಂಡ್ಸೆ ಸಿ.ಎ ಬ್ಯಾಂಕ್ ನಿದೇರ್ಶಕರಾದ ಬಿ.ರಾಮ ಹೊಸೂರು ಮತ್ತು ನಾಗಮ್ಮ ದಂಪತಿಗಳ ಪುತ್ರ.