ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಕೊಚ್ಚಿನ್ ಶಿಫ್‌ಯಾರ್ಡ್ ಲಿಮಿಟೆಡ್, ಮಲ್ಪೆಯ ಸಿಬ್ಬಂದಿಗಳಿಗೆ ಡಿಸೆಂಬರ್ 5 ರಿಂದ 7 ರ ವರೆಗೆ ಪ್ರಥಮ ಚಿಕಿತ್ಸಾ ತರಬೇತಿ ನಡೆಯಿತು.
ಪ್ರಥಮ ಚಿಕಿತ್ಸಾ ತರಬೇತುದಾರ ಡಾ. ಸುರೇಶ್ ಶೆಣೈ ಹಾಗೂ ಡಾ. ಕೀರ್ತಿ ಅಪಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನ, ರಕ್ತಸ್ರಾವವನ್ನು ತಡೆಗಟ್ಟುವ ಕುರಿತು, ಬ್ಯಾಂಡೇಜ್ ಮಾಡುವ ವಿಧಾನ, ಸಿಪಿಆರ್ ಮಾಡುವ ವಿಧಾನ, ಹಾವು ಕಡಿತ, ವಿಷ ಸೇವನೆ, ಉಸಿರುಗಟ್ಟಿಸುವಿಕೆ, ಮುಳುಗುವಿಕೆ ಮುಂತಾದ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಪ್ರಾಯೋಗಿಕ ಪ್ರದರ್ಶನಗಳ ಮೂಲಕ ತರಬೇತಿ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಕೊಚ್ಚಿನ್ ಶಿಫ್‌ಯಾರ್ಡ್ ಲಿಮಿಟೆಡ್, ಮಲ್ಪೆಯ ಸಿ.ಇ.ಓ ಹರಿಕುಮಾರ್ ಹಾಗೂ ಡೆಪ್ಯೂಟಿ ಜನರಲ್ ಮೆನೇಜರ್ ಅಂಬಾಲವನನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಕೊಚ್ಚಿನ್ ಶಿಫ್‌ಯಾರ್ಡ್ ಲಿಮಿಟೆಡ್‌ನ 25 ಸಿಬ್ಬಂದಿಗಳಿಗೆ ತರಬೇತಿ ನೀಡಲಾಯಿತು.