ಮಣಿಪಾಲ: ಸೂರ್ಯನ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಮಂಗಳ ಗ್ರಹವು ಡಿಸೆಂಬರ್ 8 ಗುರುವಾರ ಭೂಮಿಗೆ ಸನಿಹದಲ್ಲಿದ್ದು ಸಂಜೆ 6 ರಿಂದ ಆಕಾಶದಲ್ಲಿ ಕಾಣಲಿದೆ. ಮಣಿಪಾಲದ ಎಂ.ಐ.ಟಿ ಉದ್ಯೋಗಿ ಆರ್ ಮನೋಹರ್ ಪರ್ಕಳ ಅವರು ನೂತನವಾಗಿ ಆವಿಷ್ಕರಿಸಿದ ಪಾಕೆಟ್ ನಲ್ಲಿ ಇರಿಸುವಂತಹ ಅಂಗೈಯಗಲದ 7 ಇಂಚು ಮತ್ತು 25× ಮೈಕ್ರೋಸ್ಕೋಪ್, ಮತ್ತು ಟೆಲಿಸ್ಕೋಪ್ ಆಗಿಯೂ ಉಪಯೋಗಿಸಬಹುದಾದ, ಅಂಗೈಯಗಲದ ಪಾಕೆಟ್ ಟೆಲಿಸ್ಕೋಪ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಅವರೇ ವಿನ್ಯಾಸ ಮಾಡಿರುವ ಇತರ ಮೇಘಾ ಜೂಮ್ ಲೆನ್ಸ್,, ಎಕ್ಸೆಲ್, ಎಂಬಂತಹ ನಾಲ್ಕು ದೂರದರ್ಶಕದ ಮೂಲಕ ಗ್ರಹಗಳನ್ನು ನೋಡಲು ಅವಕಾಶವಿದೆ.
ಇವರು ಆವಿಷ್ಕರಿಸಿದ ದೂರದರ್ಶಕದಲ್ಲಿ ಗ್ರಹಗಳನ್ನು ನೇರವಾಗಿ ನೋಡುವುದೇ ವಿಶೇಷ. ಅದಕ್ಕಾಗಿ ಇವರಿಗೆ ಪೇಟೆಂಟ್ ಸಿಕ್ಕಿರುತ್ತದೆ. ಇವರು ನಿರ್ಮಿಸಿರುವ ದೂರದರ್ಶಕದಲ್ಲಿ ನೇರವಾಗಿ ಪ್ರತಿಬಿಂಬ ಕಾಣಿಸುವುದು ವಿಶೇಷವಾಗಿರುತ್ತದೆ. ಇದೀಗ ಅಂಗೈಯಗಲದ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ. ಹುಣ್ಣಿಮೆ ಚಂದ್ರ, ಭೂಮಿಗೆ ಅತೀ ಸಮೀಪ ಇರುವ ಮಂಗಳ ಗ್ರಹ, ಗುರುಗ್ರಹ, ಶನಿಗ್ರಹ, ಮೊದಲಾದ ಗ್ರಹಗಳನ್ನು ಹಾಗೂ ನಕ್ಷತ್ರ ಪುಂಜಗಳನ್ನು ಆವಿಷ್ಕರಿಸಿದ ಪಾಕೆಟ್ ಟೆಲಿಸ್ಕೋಪ್ ನಲ್ಲಿ ನೋಡಬಹುದು.
ಪರ್ಕಳದ ಸ್ವಾಗತ ಹೋಟೆಲ್ ನ ಬಳಿ ಡಿಸೆಂಬರ್ 8 ರ ಗುರುವಾರ ಸಂಜೆ 5:30ರಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ಖಗೋಳಾಸಕ್ತರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿಸಿದ್ದಾರೆ.