ಕಾರ್ಕಳ: ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ನೇತೃತ್ವದಲ್ಲಿ ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಯೂಥ್ ಫಾರ್ ಸೇವಾ ಉಡುಪಿ ಇವರ ಸಹಕಾರದಲ್ಲಿ ಅಭಾ ಕಾರ್ಡ್ ಮತ್ತು ಇ – ಶ್ರಮ್ ಕಾರ್ಡ್ ನೋಂದಣಿ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ಇವರ ಸಹಕಾರದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ನೋಂದಣಿ ಕಾರ್ಯಕ್ರಮ ಭಾನುವಾರ ಸಾಣೂರು ಗ್ರಾಮ ಪಂಚಾಯತ್ ನ ಸುವರ್ಣ ಗ್ರಾಮೋದಯಸೌಧದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ. ಯಶೋಧರ ಎಂ. ಉದ್ಘಾಟಿಸಿ ಮಾತನಾಡುತ್ತಾ, ನಿಯಮಿತ ಆರೋಗ್ಯ ತಪಾಸಣೆಯಿಂದ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದರು.
ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಕಳ ಇಲ್ಲಿನ ಸಾರ್ವಜನಿಕ ಸಂಪರ್ಕಧಿಕಾರಿ ಶುಭಕರ್ ಅಂಚನ್ ಪ್ರಸ್ತಾವನೆಗೈದರು. ಯೂಥ್ ಫಾರ್ ಸೇವಾ ಉಡುಪಿ ಇದರ ರಮಿತಾ ಶೈಲೆಂದ್ರ ಇವರು ಅಭಾ ಕಾರ್ಡ್ ಮತ್ತು ಇ – ಶ್ರಮ್ ಕಾರ್ಡ್ ನೊಂದಣಿ ಮತ್ತು ಇದರ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಅಧಿಕಾರಿಗಳಾದ ಗುರುಪ್ರಸಾದ್ ಇವರು ಆಧಾರ್ ಕಾರ್ಡ್ ತಿದ್ದುಪಡಿಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಕಾರ್ತಿಕ್ ರಾವ್, ಡಾ. ನಮಿತಾ ಕಾಮತ್, ಯುವಕ ಮಂಡಲದ ಹಿರಿಯ ಸದಸ್ಯರಾದ ರಾಘು ಸುವರ್ಣ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಸ್ವಾಗತಿಸಿ, ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 52 ಮಂದಿ ಅಭಾ ಕಾರ್ಡ್ ಇ -ಶ್ರಮ್ ಕಾರ್ಡ್ ಮತ್ತು 39 ಮಂದಿ ಆಧಾರ್ ಕಾರ್ಡ್ ತಿದ್ದುಪಡಿ, 32 ಮಂದಿ ಹೊಸ ನೊಂದಣಿ ಮಾಡಿದರು. 116 ಮಂದಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡರು.