ಬ್ರಹ್ಮಾವರ: ನೆಹರು ಯುವ ಕೇಂದ್ರ ಉಡುಪಿ, ಸಮೃದ್ಧಿ ಮಹಿಳಾ ಮಂಡಳಿ (ರಿ) ಪೇತ್ರಿ ಚೇರ್ಕಾಡಿ, ಲಯನ್ಸ್ ಕ್ಲಬ್ ಪೇತ್ರಿ, ಶಿವಾನಿ ವಿಪ್ರ ಮಹಿಳಾ ಮಂಡಳಿ ಸೂರಾಲು ವಲಯ, ಶಾರದಾ ಪ್ರೌಢಶಾಲೆ ಮು0ಡ್ಕಿನಜೆಡ್ಡು ಚೇರ್ಕಾಡಿ ಸಂಯುಕ್ತ ಆಶ್ರಯದಲ್ಲಿ ಹದಿಹರೆಯ ಅರಿವು ತಿಳಿವು ಕಾರ್ಯಕ್ರಮ ಚೇರ್ಕಾಡಿಯ ಶಾರದಾ ಪ್ರೌಢಶಾಲೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುಕ್ತ ಹಾಗೂ ಮಾಹೆಯ ಸ್ಟೂಡೆಂಟ್ ಕೌನ್ಸಿಲರ್ ಶಿಲ್ಪಾ ಜೋಶಿ ಹದಿಹರೆಯದಲ್ಲಿ ತಿಳಿದಿರಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್ ನಾಯ್ಕ್, ಸಮೃದ್ಧಿ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್, ಶಿವಾನಿ ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಸಹನಾ.ಕೆ. ಹೆಬ್ಬಾರ್, ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ, ಸಮೃದ್ಧಿ ಮಹಿಳಾ ಮಂಡಳಿ ಕಾರ್ಯದರ್ಶಿ ಆಶಾ ಪಾಟೀಲ್, ಕೋಶಾಧಿಕಾರಿ ವನಿತಾ ಪಿ ಶೆಟ್ಟಿ, ಶಿವಾನಿ ವಿಪ್ರ ಮಹಿಳಾ ಮಂಡಳಿ ಕೋಶಾಧಿಕಾರಿ ಶ್ರೀಲಕ್ಷ್ಮೀ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಕೆನರಾ ಎಜ್ಯುಕೇಶನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಶಾರದಾ ಪ್ರೌಢಶಾಲೆ, ಆರ್. ಕೆ. ಪಿ, ಪ್ರೈಮರಿ ಸ್ಕೂಲ್ ಇಲ್ಲಿನ ವಿದ್ಯಾರ್ಥಿಗಳು, ಪೋಷಕರು, ಬೋಧಕರು ಉಪಸ್ಥಿತರಿದ್ದರು.