ಉಡುಪಿ: ಅಂತರಾಷ್ಟ್ರೀಯ ಭಾರತೀಯ ಜೇಸಿಐನ ವಲಯ ಹದಿನೈದರ ಪ್ರತಿಷ್ಠಿತ ಘಟಕ ಬೆಳ್ಮಣ್ಣು ಜೇಸಿಐನ ೪೩ನೇ ಪದಗ್ರಹಣ ಸಮಾರಂಭವು ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಸಮಾಜಮುಖಿ ಚಿಂತನೆಯನ್ನೊಳಗೊಂಡ ಸಮಾಜಕ್ಕೆ ಉತ್ತಮ ನಾಯಕರನ್ನು ನೀಡುತ್ತಿರುವ ವಿಶ್ವದ ಏಕೈಕ ವ್ಯಕಿತ್ವ ವಿಕಸನ ಸಂಸ್ಥೆಯಾದ ಜೇಸಿ ಸಂಸ್ಥೆಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು
ಕರ್ನಾಟಕ ಮೀನುಗಾರಿಕಾ ನಿಗಮ ಮಂಡಳಿಯ ನಿರ್ದೇಶಕರಾದ ಕಟಪಾಡಿ ಗೀತಾಂಜಲಿ ಸುವರ್ಣ ಅವರು ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೆಳ್ಮಣ್ಣು ಜೇಸಿಐನ ನೂತನ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಮೈಸೂರು ಎಸ್.ಐ.ಆರ್.ಡಿ. ತರಬೇತಿ ಸಂಯೋಜಕರಾದ ಸುಧಾಮಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೇಸಿಐ ವಲಯ ೧೫ರ ನಿಯೋಜಿತ ವಲಯಾಧ್ಯಕ್ಷರಾದ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ನೂತನ ಅಧ್ಯಕ್ಷರ ಪರಿಚಯ ವಾಚಿಸಿ, ಅಭಿನಂದನಾ ಭಾಷಣ ಮಾಡಿದರು. ನಿರ್ಗಮನ ಅಧ್ಯಕ್ಷರಾದ ಸಾಂತೂರು ವೀಣೇಶ್ ಅಮೀನ್ ಅವರಿಗೆ ಅಭಿನಂದನಾ ಸನ್ಮಾನ ನಡೆಸಲಾಯಿತು.
ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಲೇಡಿ ಜೇಸಿ ಸಂಯೋಜಕಿ ಸೌಜನ್ಯ ಸತೀಶ್ ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ ವೇದಿಕೆಯಲ್ಲಿದ್ದರು. ಮುಖ್ಯ ಅತಿಥಿಗಳ ಪರಿಚಯವನ್ನು ಬೆಳ್ಮಣ್ಣು ಜೇಸಿಐನ ಪೂವಾಧ್ಯಕ್ಷರಾದ ರವಿರಾಜ್ ಶೆಟ್ಟಿ, ಸಂಜೀವ ಪೂಜಾರಿ ಹೇಳಿದರು. ನೂತನ ಸದಸ್ಯರ ಪರಿಚಯನ್ನು ಘಟಕದ ನಿರ್ದೇಶಕರಾದ ರಾಜೇಶ್ ಕುಲಾಲ್ ವಾಚಿಸಿದರು.