ಉಡುಪಿ: ಜೈ ತುಲುನಾಡ್(ರಿ) ತುಳುನಾಡಿನ ಐತಿಹಾಸಿಕ ಪುರಾತನ ರಾಜಧಾನಿಯಾದ ಬಾರ್ಕೂರಿನಲ್ಲಿ ತುಳುಲಿಪಿ ನಾಮಫಲಕ ಉದ್ಘಾಟನೆ ಮತ್ತು ‘ಅಲ್ಲಿಗೆ’ ತುಳುಲಿಪಿ ಫಾಂಟ್ ಬಿಡುಗಡೆಯ ಸಮಾರಂಭವು ಅಕ್ಟೋಬರ್ 30 ರಂದು ಬೆಳಿಗ್ಗೆ 10.30ಕ್ಕೆ ಬಾರ್ಕೂರಿನ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷರಾದ ಅಶ್ವಥ್ ತುಳುವೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ ಶಾಂತರಾಮ್ ಶೆಟ್ಟಿ ಇವರು ನಡೆಸಲಿದ್ದು, ಗೌರವ ಉಪಸ್ಥಿತರಾಗಿ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ಮುಕ್ಯಸ್ಥರಾದ ಮಂಜುನಾಥ್ ಭಟ್ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಡೆಮಿ ಮಾಜಿ ಸದಸ್ಯರು ಮತ್ತು ಅಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್, ಟೈಮ್ಸ್ ಆಫ್ ಕುಡ್ಲ ಸಂಪಾದಕರಾದ ಶಶಿ ಬಂಡಿಮಾರ್, ಜೈ ತುಲುನಾಡ್ (ರಿ) ಉಪಾಧ್ಯಕ್ಷರಾದ ವಿಶು ಶ್ರೀಕೇರ ಉಪಸ್ಥಿತರಿರುವರು.
ಊರಿನ ದೇವಸ್ಥಾನ ಮತ್ತು ಸಂಘ-ಸಂಸ್ಥೆಗಳ ಗಣ್ಯ ವಕ್ತಿಗಳು, ಸಂಘಟನೆಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಜೈ ತುಲುನಾಡ್(ರಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಸದಾಶಿವ ಮುದ್ರಾಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.